Publish Date: Fri, 22 Sep 2023 (19:21 IST)
Updated Date: Fri, 22 Sep 2023 (19:29 IST)
ಕೆನಡಾದ ಮೊಗಾ ಜಿಲ್ಲೆಯಲ್ಲಿ ದವೀಂದರ್ ಬಾಂಬಿಹಾ ಗ್ಯಾಂಗ್‌ನ ಸುಖದುಲ್ ಸಿಂಗ್ ಅಲಿಯಾಸ್ ಸುಖ ದುನೆಕೆಯನ್ನು ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಘಟನೆಯು ಜೂನ್ 19 ರಂದು ಸರ್ರೆಯಲ್ಲಿ ನಡೆದ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತೆಯೇ ಇದೆ. ಆರೋಪಿಗಳು ಸುಖದುಲ್ ಸಿಂಗ್ ಅಲಿಯಾಸ್ ಸುಖ ದುನೆಕೆ ಮೇಲೆ ಸುಮಾರು 15 ಗುಂಡುಗಳನ್ನು ಹಾರಿಸಿದ್ದಾರೆ. 2017 ರಲ್ಲಿ ನಕಲಿ ದಾಖಲೆಗಳ ಸಹಾಯದಿಂದ ದುನೆಕೆ ಭಾರತದಿಂದ ಕೆನಡಾಕ್ಕೆ ಪರಾರಿಯಾಗಿದ್ದ, ಸುಖದುಲ್ ಸಿಂಗ್ ವಿರುದ್ಧ ಏಳು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಪಂಜಾಬ್ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಕನಿಷ್ಠ 29 ಗ್ಯಾಂಗ್ಸ್ಟರ್ಗಳಿದ್ದಾರೆ. ಕಾನೂನಿನಿಂದ ತಪ್ಪಿಸಿಕೊಳ್ಳಲು ಭಾರತದ ಹೊರಗೆ ಆಶ್ರಯ ಪಡೆಯುತ್ತಿದ್ದಾರೆ. ಅವರು ಹಲವು ವರ್ಷಗಳ ಹಿಂದೆ ಭಾರತದ ಪಾಸ್‌ಪೋರ್ಟ್‌ನಲ್ಲಿ ಅಥವಾ ನಕಲಿ ಪ್ರಯಾಣ ದಾಖಲೆಗಳ ಸಹಾಯದಿಂದ ನೇಪಾಳದ ಮೂಲಕ ಬೇರೆ ದೇಶಕ್ಕೆ ಹೋಗಿದ್ದರು. ಸುಖದುಲ್ ಸಿಂಗ್ ದುನೆಕೆ ಮೋಸ್ಟ್ ವಾಂಟೆಡ್ ಅರ್ಶ್ ದಲ್ಲಾ ಗ್ಯಾಂಗ್‌ಗೆ ಸಂಬಂಧ ಹೊಂದಿದ್ದಾನೆ. ಸುಖದುಲ್ ಸಿಂಗ್ ದುನೆಕೆ ಟಾರ್ಗೆಟ್ ಕಿಲ್ಲಿಂಗ್ನಲ್ಲಿ ಕುಖ್ಯಾತಿ ಪಡೆದಿದ್ದ.