Select Your Language

Notifications

webdunia
webdunia
webdunia
webdunia

ಕಾಡ್ಗಿಚ್ಚಿಗೆ ಕೆಂಡವಾದ ಕೆನಡಾ

ಕಾಡ್ಗಿಚ್ಚಿಗೆ ಕೆಂಡವಾದ ಕೆನಡಾ
ಕೆನಡಾ , ಮಂಗಳವಾರ, 22 ಆಗಸ್ಟ್ 2023 (14:50 IST)
ಕೆನಡಾದ ಶುಸ್ವಾಪ್ ಪ್ರದೇಶದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಹೊತ್ತಿ ಉರಿಯುತ್ತಿದೆ. ಕಾಡ್ಗಿಚ್ಚಿನ ಪರಿಣಾಮ ಹಲವು ಮನೆಗಳು ಸುಟ್ಟು ಕರಕಲಾಗಿವೆ. ಕೆನಡಾದ ದಕ್ಷಿಣಕ್ಕಿರುವ ಒಕನಾಗನ್ ಸರೋವರದ ತೀರದವರೆಗೂ ಕಾಡ್ಗಿಚ್ಚು ಆವರಿಸಿದ್ದು, ಅಲ್ಲಿಗೆ ಬರುವ ಪ್ರವಾಸಿಗರಿಗೆ ಸರ್ಕಾರ ನಿರ್ಬಂಧ ವಿಧಿಸಿದೆ. ಅಲ್ಲಿಯೇ ಸಮೀಪದಲ್ಲಿರುವ ವೆಸ್ಟ್​​ ಕೆಲೋನಾ ನಗರದಲ್ಲಿ ಸುಮಾರು 35 ಸಾವಿರ ಮನೆಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿವೆ. ಕೆಲೋನಾ ನಗರದಲ್ಲಿರುವ 20000 ನಿವಾಸಿಗಳಲ್ಲಿ 19000 ನಿವಾಸಿಗಳನ್ನ ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಛಾವಣಿಯಿಂದ ಹಾವುಗಳನ್ನು ಹೊರ ತೆಗೆದ ಯುವತಿ