Select Your Language

Notifications

webdunia
webdunia
webdunia
webdunia

ಕೆನಡಾ ದೇಗುಲದ ಮೇಲೆ ಮತ್ತೆ ಖಲಿಸ್ತಾನ ಉಗ್ರರ ಅಟ್ಟಹಾಸ

ಕೆನಡಾ ದೇಗುಲದ ಮೇಲೆ ಮತ್ತೆ ಖಲಿಸ್ತಾನ ಉಗ್ರರ ಅಟ್ಟಹಾಸ
ಕೆನಡಾ , ಭಾನುವಾರ, 10 ಸೆಪ್ಟಂಬರ್ 2023 (18:21 IST)
ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಉಪಟಳ ಮುಂದುವರೆದಿದ್ದು, ಇಲ್ಲಿನ ಹಿಂದೂ ದೇಗುಲವೊಂದರ ಮೇಲೆ ದೇಶ ವಿರೋಧಿ ಮತ್ತು ಮೋದಿ ದ್ವೇಷದ ಹೇಳಿಕೆಗಳನ್ನು ಬರೆಯಲಾಗಿದೆ. ಬ್ರಿಟಿಷ್‌ ಕೊಲಂಬಿಯಾ ಪ್ರಾಂತ್ಯದಲ್ಲಿರುವ ಶ್ರೀ ಮಾತಾ ಭಾಮೇಶ್ವರಿ ದುರ್ಗಾ ದೇವಿ ದೇಗುಲವನ್ನು ಖಲಿಸ್ತಾನಿಗಳು ವಿರೂಪಗೊಳಿಸಿದ್ದಾರೆ. ದೇಗುಲದ ಗೋಡೆ ಮೇಲೆ ಕಪ್ಪು ಬಣ್ಣದ ಸ್ಪ್ರೇ ಇಂದ ಮೋದಿ ಓರ್ವ ಭಯೋತ್ಪಾದಕ, ಪಂಜಾಬ್‌ ಭಾರತದ ಭಾಗವಲ್ಲ ಎಂದು ಬರೆದಿದ್ದಾರೆ. ಕಳೆದ ತಿಂಗಳು, ಆಗಸ್ಟ್‌ನಲ್ಲಿ, ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ದೇವಾಲಯವನ್ನು ಧ್ವಂಸಗೊಳಿಸಲಾಗಿದ್ದು,ಹಿಂದಿನ ಘಟನೆಯಲ್ಲೂ ದೇವಸ್ಥಾನದ ಗೋಡೆಗಳ ಮೇಲೆ ಭಾರತ ವಿರೋಧಿ ಗೀಚುಬರಹವನ್ನು ಎರಚಲಾಗಿತ್ತು. ಇದೀಗ ಜಿ20 ಶೃಂಗಸಭೆ ನಡೆಯುತ್ತಿರುವ ಬೆನ್ನಲ್ಲೇ ಭಾರತ ಮತ್ತು ಪ್ರಧಾನಿ ವಿರುದ್ಧ ಬರೆದಿರುವುದು ಕಂಡುಬಂದಿದ್ದು  ನೆಟ್ಟಿಗರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊರಾಕ್ಕೋದಲ್ಲಿ ಪ್ರಬಲ ಭೂಕಂಪ,296 ಜನ ದುರ್ಮರಣ