Publish Date: Sat, 08 Apr 2023 (21:00 IST)
Updated Date: Sat, 08 Apr 2023 (20:14 IST)
ಮಾಜಿ ಡಿಸಿಎಂ G. ಪರಮೇಶ್ವರ್ ಸ್ವಕ್ಷೇತ್ರದ ತುಮಕೂರಿನ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ. ಬರೋಬ್ಬರಿ 13 ಗ್ರಾಮಗಳಿಂದ ಮತದಾನ ಬಹಿಷ್ಕಾರಿಸಲಾಗಿದೆ. 2016ರಲ್ಲಿ ಸುಧಾಕರ್ ಲಾಲ್ ಶಾಸಕರಾಗಿದ್ದಾಗ ಕ್ರಷರ್ ಮಂಜೂರಾಗಿದೆ. ಶ್ರೀ ಧನಲಕ್ಷ್ಮಿ ಸ್ಟೋನ್ ಕ್ರಷರ್ ಮಾಲೀಕತ್ವದ ಕ್ರಷರ್ ತೆರೆಯಲು ಬಿಡದೇ ಗ್ರಾಮಸ್ಥರು ಹೋರಾಟ ನಡೆಸುತ್ತಿದ್ದಾರೆ. ಆದರೆ ಗ್ರಾಮಸ್ಥರ ಮನವಿಗಳಿಗೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಅಧಿಕಾರಿಗಳ ನಡೆಗೆ ಬೇಸತ್ತು ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ. 13 ಹಳ್ಳಿಯ ಒಟ್ಟು 5,000ಕ್ಕೂ ಹೆಚ್ಚು ಮತದಾರರು ಮತದಾನ ಬಹಿಷ್ಕರಿಸಿದ್ದಾರೆ.