Select Your Language

Notifications

webdunia
webdunia
webdunia
webdunia

ಇಂಡಿ ಕ್ಷೇತ್ರದ BJP ಟಿಕೆಟ್‌ಗಾಗಿ ಭಾರೀ ಫೈಟ್​​​

Heavy fight for BJP ticket of Indy constituency
ವಿಜಯಪುರ , ಶನಿವಾರ, 8 ಏಪ್ರಿಲ್ 2023 (16:00 IST)
ಚುನಾವಣೆ ಘೋಷಣೆ ಆಗ್ತಿದ್ದಂತೆ ಟಿಕೆಟ್​ಗಾಗಿ ರಾಜಕೀಯ ನಾಯಕರು ಲಾಭಿ ನಡೆಸುತ್ತಿದ್ದಾರೆ. ಬೇರೆ ಪಕ್ಷಕ್ಕೆ ಜಂಪ್​ ಮಾಡ್ತೀವಿ.ಇಲ್ಲವೇ ನನ್ನ ಹೊರತಾಗಿ ಬೇರೆಯವರಿಗೆ ಟಿಕೆಟ್​ ನೀಡಿದ್ರೆ ನಾನು ಬೆಂಬಲ ನೀಡುವುದಿಲ್ಲ. ಹೀಗೆ ಹಲವು ವಿಧವಾಗಿ ಲಾಭಿಗೆ ಮುಂದಾಗ್ತಾರೆ. ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಭಾರೀ ಫೈಟ್ ನಡೆದಿದ್ದು, ಇಂಡಿ ಕ್ಷೇತ್ರದಲ್ಲಿ ಆರು ಜನ ಆಕಾಂಕ್ಷಿಗಳು ಟಿಕೆಟ್​ಗಾಗಿ ಲಾಭಿ ನಡೆಸುತ್ತಿದ್ದಾರೆ.. ದಯಾಸಾಗರ ಪಾಟೀಲ್, ಶೀಲವಂತ ಉಮರಾಣಿ, ರವಿಕಾಂತ ಪಾಟೀಲ್, ಶಂಕರಗೌಡ ಪಾಟೀಲ್, ಕಾಸುಗೌಡ ಬಿರಾದಾರ, ಸಾರ್ವಭೌಮ ಬಗಲಿ ನಡುವೆ ತೀವ್ರ ಪೈಪೋಟಿ ಎದ್ದಿದೆ.. ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಅಭ್ಯರ್ಥಿಗಳ ಘೋಷಣೆಯಾಗಿದೆ.. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಯಶವಂತರಾಯಗೌಡ ಪಾಟೀಲ್‌ಗೆ ಟಿಕೆಟ್‌ ಘೋಷಣೆಯಾಗಿದ್ದು, ಜೆಡಿಎಸ್‌ನಿಂದ ಬಿ.ಡಿ.ಪಾಟೀಲ್‌ಗೆ ಟಿಕೆಟ್​ ಘೋಷಣೆ ಮಾಡಲಾಗಿದೆ. ಈ ಅಭ್ಯರ್ಥಿಗಳಿಗೆ ಪೈಪೋಟಿ ನೀಡುವ ಅಭ್ಯರ್ಥಿಗಾಗಿ BJP ಹೈಕಮಾಂಡ್​​​ ಸರ್ಚ್​ ಮಾಡ್ತಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯ 4 ಸಚಿವರು, 32 ಶಾಸಕರಿಗೆ ಕೊಕ್​​​?