Select Your Language

Notifications

webdunia
webdunia
webdunia
webdunia

ಕೃಷ್ಣೆಯ ರುದ್ರತಾಂಡವದಿಂದ ‘ಮಹಾ’ ಅನಾಹುತ

ಕೃಷ್ಣೆಯ ರುದ್ರತಾಂಡವದಿಂದ ‘ಮಹಾ’ ಅನಾಹುತ
ಚಿಕ್ಕೊಡಿ , ಗುರುವಾರ, 8 ಆಗಸ್ಟ್ 2019 (18:44 IST)
ಉತ್ತರ ಕರ್ನಾಟಕದ ಜೀವ ನದಿ ಕೃಷ್ಣೆಯು ಇದೀಗ ರುದ್ರತಾಂಡವವಾಡುತ್ತಿದ್ದಾಳೆ.

ಕಳೆದೆರಡು ತಿಂಗಳ ಹಿಂದೆ ಸಂಪೂರ್ಣ ಬತ್ತಿದ ಕೃಷ್ಣಾ ನದಿ ಇದೀಗ 50ಕ್ಕೂ ಹೆಚ್ಚು ಹಳ್ಳಿಗಳಿಗೆ ಕಾಲಿಟ್ಟಿದ್ದಾಳೆ.  

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ಚಿಕ್ಕೋಡಿಯ ಎಂಟು ತಾಲ್ಲೂಕುಗಳು ಸಂಪೂರ್ಣ ಜಲಾವೃತವಾಗಿವೆ. 50 ಕ್ಕೂ ಹೆಚ್ಚಿನ ಹಳ್ಳಿಗಳು ನಡುಗಡ್ಡೆಯಂತಾಗಿವೆ.

ಜಿಲ್ಲಾಡಳಿತ ಪ್ರವಾಹ ಸಂತ್ರಸ್ತರ ರಕ್ಷಣೆಗೆ ಧಾವಿಸಿದ್ದು ಅಪಾರ ಪ್ರಮಾಣದ ಜನ ಜಾನುವಾರಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಡಲಾಗುತ್ತಿದೆ.

ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ  ನಾಲ್ಕು ಲಕ್ಷ ಇಪ್ಪತ್ತು ಸಾವಿರ ಕ್ಯೂಸೇಕ್ ನೀರು ಹರಿಬಿಟ್ಟಿದ್ದು  ಪ್ರವಾಹ ದಿನದಿಂದ ದಿನಕ್ಕೆ ಏರುತ್ತಿದ್ದು, ಜನರ ಸ್ಥಿತಿ ಶೋಚನಿಯವಾಗಿದೆ.  




Share this Story:

Follow Webdunia kannada

ಮುಂದಿನ ಸುದ್ದಿ

ತುಂಬಿದ ಭದ್ರಾ ಜಲಾಶಯ; ಜನರು ಬದುಕು ಅಭದ್ರ