Select Your Language

Notifications

webdunia
webdunia
webdunia
webdunia

ಮಧ್ಯೆ ಕರ್ನಾಟಕದಲ್ಲಿ ಪ್ರವಾಹ; ಸ್ನಾನಘಟ್ಟ ಮುಳುಗಡೆ, ಸಂಚಾರ ಬಂದ್

ಮಧ್ಯೆ ಕರ್ನಾಟಕದಲ್ಲಿ ಪ್ರವಾಹ; ಸ್ನಾನಘಟ್ಟ ಮುಳುಗಡೆ, ಸಂಚಾರ ಬಂದ್
ದಾವಣಗೆರೆ , ಬುಧವಾರ, 7 ಆಗಸ್ಟ್ 2019 (16:23 IST)
ಮಹಾ ಮಳೆಗೆ ಪ್ರವಾಹ ಭೀತಿ ತಲೆದೋರಿದ್ದು, ಜನರು ಪರದಾಡುವಂತಾಗಿದೆ. ಏತನ್ಮಧ್ಯೆ ರಸ್ತೆಗಳ ಮೇಲೆ ನದಿಯಂತೆ ನೀರು ಹರಿಯುತ್ತಿರೋದ್ರಿಂದ ಅಲ್ಲಲ್ಲಿ ವಾಹನ ಸಂಚಾರ್ ಬಂದ್ ಆಗಿದೆ.

ತುಂಗಾಭದ್ರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಹೊನ್ನಾಳಿ, ಹರಿಹರ, ಹರಪನಹಳ್ಳಿ ತಾಲ್ಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಹೊನ್ನಾಳಿ ಪಟ್ಟಣದ ಸಮೀಪ 10.26 ಮೀಟರ್ ತಲುಪಿದೆ ನೀರಿನ ಮಟ್ಟ. ಅಪಾಯದ ಮಟ್ಟ 12 ಮೀಟರ್ ಮೀರಿದ್ರೆ ಹೊನ್ನಾಳಿ ಪಟ್ಟಣಕ್ಕೆ ನೀರು ನುಗ್ಗುವ ಸಾಧ್ಯತೆ ದಟ್ಟವಾಗಿದೆ. ಹೊನ್ನಾಳಿ ಬಾಲ್ ರಾಜ್ ಘಾಟ್  ನ 59  ಜನರಿಗೆ  ಗಂಜಿಕೇಂದ್ರ ಸ್ಥಾಪನೆ ಮಾಡಲಾಗಿದೆ.  
ಹೊನ್ನಾಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ  ಗಂಜಿಕೇಂದ್ರ ಸ್ಥಾಪನೆ ಆಗಿದೆ.

ಹರಿಹರ ತಾಲ್ಲೂಕಿನ ಉಕ್ಕಡಗಾತ್ರಿ ಕ್ಷೇತ್ರದ ದೇವಾಲಯದ ಸ್ನಾನಘಟ್ಟಗಳು ನದಿ ನೀರಿನಲ್ಲಿ ಮುಳುಗಡೆಯಾಗಿವೆ.

ಉಕ್ಕಡಗಾತ್ರಿ ಪತ್ಯಾಪುರ ಮಾರ್ಗದ ಸೇತುವೆ ಬಂದ್ ಆಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.

ದ್ವೀಪದಂತಾಗಿದೆ ಉಕ್ಕಡಗಾತ್ರಿ. ಸುತ್ತಮುತ್ತಾ ನೂರಾರು ಎಕರೆ ಬೆಳೆ ಮುಳುಗಡೆಯಾಗಿದೆ. ಹರಿಹರ ತಾಲ್ಲೂಕಿನ  ಸಾರಥಿ - ಚಿಕ್ಕಬಿದರೆ ರಸ್ತೆ ಸಂಪರ್ಕವು ಕಡಿತಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಪ್ರವಾಹದಲ್ಲಿ ಕೊಚ್ಚಿಹೋದ ಯುವಕ ಸಾವು