Select Your Language

Notifications

webdunia
webdunia
webdunia
webdunia

ಪ್ರವಾಹದಲ್ಲೂ ಸಂತ್ರಸ್ಥರು ಯಡಿಯೂರಪ್ಪರಿಗೆ ತಟ್ಟಿದ್ದು ಏನು?

ಪ್ರವಾಹದಲ್ಲೂ ಸಂತ್ರಸ್ಥರು ಯಡಿಯೂರಪ್ಪರಿಗೆ ತಟ್ಟಿದ್ದು ಏನು?
ಬೆಳಗಾವಿ , ಗುರುವಾರ, 8 ಆಗಸ್ಟ್ 2019 (18:05 IST)
ತಮ್ಮ ಬದುಕು ನೀರಿನಲ್ಲಿ ಕೊಚ್ಚಿಹೋಗಿದೆ. ಮನೆ, ಮಠಗಳು ಜಲಾವೃತವಾಗಿವೆ. ಇಂಥ ಪರಿಸ್ಥಿತಿಯಲ್ಲೂ ನೆರೆ ಸಂತ್ರಸ್ತರು ಸಿಎಂಗೆ ಈ ಕೆಲಸ ಮಾಡಿದ್ದಾರೆ.

ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಆರಂಭಿಸಲಾಗಿರುವ ಪರಿಹಾರ ಕೇಂದ್ರಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ನೀಡಿದ್ರು. ಆಗ ಜನರು ತಮ್ಮ ಸಂಕಷ್ಟದ ನಡುವೆಯೂ ಚಪ್ಪಾಳೆ ತಟ್ಟಿ ಸ್ವಾಗತ ಕೋರಿದ್ರು.

ಸಂತ್ರಸ್ತರನ್ನು ಕಂಡ ತಕ್ಷಣ ಮುಖ್ಯಮಂತ್ರಿಗಳು ಕೈಮುಗಿದುಕೊಂಡು ನೇರವಾಗಿ ಅವರ ಬಳಿಗೆ ತೆರಳಿದರು. ಇದರಿಂದ ಸಂತಸಗೊಂಡ ಬೆಳಗಾವಿ ನಗರದ ಸಾಯಿಭವನ ಹಾಗೂ ಸಂಕೇಶ್ವರದ ರಾಮಚಿತ್ರ ಮಂದಿರದಲ್ಲಿ ಆರಂಭಿಸಿರುವ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರ ಜತೆ ಮಾತನಾಡಿದ ಅವರು, ಊಟೋಪಹಾರ, ಬಟ್ಟೆ, ಹಾಸಿಗೆ-ಹೊದಿಕೆಗಳನ್ನು ತಕ್ಷಣವೇ ಒದಗಿಸಲಾಗುವುದು ಎಂದ್ರು.

ಬಹುತೇಕ ಸಂತ್ರಸ್ತರು ಮನೆಗಳನ್ನು ಒದಗಿಸುವಂತೆ ಮನವಿ ಮಾಡಿಕೊಂಡ್ರು.

ರೈಲ್ವೆ ಖಾತೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ, ಶಾಸಕರಾದ ಉಮೇಶ್ ಕತ್ತಿ, ಅಭಯ್ ಪಾಟೀಲ, ಅನಿಲ್ ಬೆನಕೆ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಬೆಳಗಾವಿ ಉತ್ತರ ವಲಯ ಐಜಿಪಿ ಎಚ್.ಜಿ. ಸುಹಾಸ್ ಇದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಆ ವಿದ್ಯಾರ್ಥಿನಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಕೇಳಿದ್ದೇನು?