Publish Date: Sun, 06 Nov 2022 (15:50 IST)
Updated Date: Sun, 06 Nov 2022 (15:52 IST)
ನಟ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ವರ್ಷಗಳೇ ಆದರೂ ಸಹ ಅಪ್ಪು ಮೇಲಿನ ಅಭಿಮಾನ ಕಿಂಚಿತ್ತು ಕಡಿಮೆ ಆಗಿಲ್ಲ. ಪುನೀತ್ ಕೊನೆದಾಗಿ ಕಾಣಿಸಿಕೊಂಡ ಸಾಕ್ಷ್ಯಾ ಚಿತ್ರ ಗಂಧದಗುಡಿ ರಿಲೀಸ್ ಆಗಿ ಜನರ ಮನಸ್ಸನ್ನು ಗೆದ್ದಿದೆ. ಪುನೀತ್ ಅಭಿಮಾನಿಗಳು ಶಾಲಾ ಮಕ್ಕಳಿಗೆ ಉಚಿತ ಚಿತ್ರ ಪ್ರದರ್ಶನ ಆಯೋಜಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಶಾಲಾ ಮಕ್ಕಳಿಗಾಗಿ ಉಚಿತ ಚಿತ್ರ ಪ್ರದರ್ಶನ ನೀಡಲಾಗಿದೆ. ಚಿತ್ರಮಂದಿರಗಳಿಗೆ ತಾವೇ ಟಿಕೆಟ್ ಹಣ ತುಂಬಿ ಮಕ್ಕಳಿಗಾಗಿ ಉಚಿತ ಪ್ರದರ್ಶನವನ್ನು ನೀಡಿದ್ದಾರೆ. ಪುಣ್ಯಕೋಟಿ ಗ್ರೂಪ್ನ ಅಧ್ಯಕ್ಷ ಮಂಜುನಾಥ್, ಲಿಂಗಯ್ಯಸ್ವಾಮಿ ಎನ್ನುವವರಿಂದ ಚಲನಚಿತ್ರ ಪ್ರದರ್ಶನದ ಉಚಿತ ಸೇವೆ ನೀಡಲಾಗಿದೆ. ಶಾಲಾ ಮಕ್ಕಳು ಅಪ್ಪುವನ್ನು ಕಣ್ತುಂಬಿಕೊಂಡ್ರು.