Select Your Language

Notifications

webdunia
webdunia
webdunia
Friday, 4 April 2025
webdunia

ಅಪ್ಪುರನ್ನ ಪಠ್ಯಕ್ಕೆ ಸೇರಿಸಲು ಮನವಿ

A request to add to Appuran's text
bangalore , ಶನಿವಾರ, 29 ಅಕ್ಟೋಬರ್ 2022 (15:36 IST)
ಇಂದು ಪವರ್​ ಸ್ಟಾರ್​ ಪುನೀತ್ ರಾಜ್‍ಕುಮಾರ್​ ಪುಣ್ಯಸ್ಮರಣೆಯಿದ್ದು, ಕಂಠೀರವ ಸ್ಟುಡಿಯೋ ಬಳಿ ಜನಸಾಗರ ಹರಿದು ಬಂದಿದೆ. ಅಪ್ಪು ಮೊದಲ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ ರಾತ್ರಿಯಿಂದಲೇ ಅಪ್ಪು ಸಮಾಧಿ ಬಳಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜನಸಾಗರವೇ ಅಪ್ಪು ಸಮಾಧಿಗೆ ಹರಿದು ಬರ್ತಿದೆ. ಪುನೀತ್ ರಾಜ್‍ಕುಮಾರ್ ರವರ ಜೀವನ ಹಾಗೂ ಸಾಧನೆಯನ್ನು ಪಠ್ಯ ಪುಸ್ತಕದಲ್ಲಿ ಸೇರಿಸುವಂತೆ ಅಪ್ಪು ಅಭಿಮಾನಿಗಳು ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಪತ್ರ ಕೊಟ್ಟಿದ್ದಾರೆ. ಪತ್ರದಲ್ಲಿ ಕನ್ನಡ ಪಠ್ಯ ಪುಸ್ತಕದಲ್ಲಿ ಅಪ್ಪು ಜೀವನ ಮತ್ತೆ ಸಾಧನೆ ಕಥೆಯನ್ನು ಸೇರಿಸಲು ಮನವಿ ಮಾಡಿದ್ದಾರೆ. ಈಗಾಗಲೇ 6ನೇ ತರಗತಿ ಪಠ್ಯದಲ್ಲಿ ಡಾ.ರಾಜ್‍ಕುಮಾರ್ ಜೀವನ ಸಾಧನೆ ಪಠ್ಯ ಸೇರಿಸಲಾಗಿದೆ. ಅದೇ ರೀತಿ ನಟ ಪುನೀತ್ ರಾಜ್‍ಕುಮಾರ್ ಜೀವನ ಸಾಧನೆ ಕಥೆ ಸೇರಿಸಲು ಅಪ್ಪು ಅಭಿಮಾನಿಗಳು ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಂಡಮಾರುತಕ್ಕೆ 47 ಮಂದಿ ಸಾವು