Select Your Language

Notifications

webdunia
webdunia
webdunia
webdunia

ಶಿಕ್ಷಕರನ್ನು ಗೌರವಿಸಲು ವಂಡರ್‌ಲಾ ವತಿಯಿಂದ 300 ಶಿಕ್ಷಕರಿಗೆ ಉಚಿತ ಪ್ರವೇಶ

ಶಿಕ್ಷಕರನ್ನು ಗೌರವಿಸಲು ವಂಡರ್‌ಲಾ ವತಿಯಿಂದ 300 ಶಿಕ್ಷಕರಿಗೆ ಉಚಿತ ಪ್ರವೇಶ
bangalore , ಗುರುವಾರ, 25 ಆಗಸ್ಟ್ 2022 (19:23 IST)
ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ಆದ ವಂಡರ್‌ ಲಾ ಹಾಲಿಡೇಸ್ ಲಿಮಿಟೆಡ್, ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗೆ ಗೌರವ ಸಮರ್ಪಿಸುವ ಸಲುವಾಗಿ 150 ಶಾಲೆಗಳಿಂದ 300 ಶಿಕ್ಷಕರನ್ನು ಆಹ್ವಾನಿಸುತ್ತಿದೆ.
 
ಈ ಆಯ್ದ ಶಾಲೆಯಿಂದ ವಂಡರ್‌ಲಾ ಪಾರ್ಕ್‌ಗೆ ಬರುವ ಈ 300 ಶಿಕ್ಷಕರಿಗೆ ವಂಡರ್‌ಲಾ ವತಿಯಿಂದ ಉಚಿತ ಪ್ರವೇಶ ನೀಡಲಾಗುತ್ತದೆ. ಈ ಕೊಡುಗೆಯು ಕೊಚ್ಚಿ, ಬೆಂಗಳೂರು ಮತ್ತು ಹೈದರಾಬಾದ್ ಪಾರ್ಕ್‌ಗಳಲ್ಲಿ ಸೆಪ್ಟೆಂಬರ್ 3 ರಿಂದ ಸೆಪ್ಟೆಂಬರ್ 5ವರೆಗೆ ಇರಲಿದೆ.
 
ಈ ಉಪಕ್ರಮದ ಕುರಿತು ಮಾತನಾಡಿದ ವಂಡರ್‌ ಲಾ ಹಾಲಿಡೇಸ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ ಚಿಟ್ಟಿಲಪಿಲ್ಲಿ, ಸಾಂಕ್ರಾಮಿಕ ರೋಗದ ಉದ್ದಕ್ಕೂ, ಶಿಕ್ಷಕರು ಆನ್‌ಲೈನ್‌ ತರಗತಿ ಹೆಸರಿನಲ್ಲಿ ಮನೆ ಹಾಗೂ ಶಾಲೆ ಎರಡೂ ಸೇವೆಗಳನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಜೀವನದ ಪಾಠ ಕಲಿಸುವ ಈ ಮಾರ್ಗದರ್ಶಕರನ್ನು ವಂಡರ್‌ಲಾ ಗೌರವಿಸುವ ಉದ್ದೇಶದಿಂದ ಈ ಕೊಡುಗೆ ನೀಡುತ್ತಿದೆ.
ಇದಷ್ಟೇ ಅಲ್ಲದೆ, ಆಗಸ್ಟ್ 29 ರಿಂದ ಸೆಪ್ಟೆಂಬರ್ 05 ರ ಅವಧಿಯಲ್ಲಿ ವಂಡರ್‌ಲಾ ಪಾರ್ಕ್‌ಗೆ ಭೇಟಿ ನೀಡುವ ಎಲ್ಲಾ ಶಿಕ್ಷಕರಿಗೂ ತಮ್ಮ ಬುಕಿಂಗ್‌ಗಳ ಮೇಲೆ ಶೇ. 20ರಷ್ಟು ರಿಯಾಯಿತಿಯನ್ನು ಘೋಷಿಸಿದೆ. ಈ ಕೊಡುಗೆಯನ್ನು ಪಡೆಯಲು ಕಡ್ಡಾಯವಾಗಿ ಗುರುತಿನ ಚೀಟಿ ಕೊಂಡೊಯ್ಯಬೇಕು.
 
ಹೆಚ್ಚಿನ ಮಾಹಿತಿಗಾಗಿ www.wonderla.com ಗೆ ಭೇಟಿ ನೀಡಿ ಅಥವಾ ಕರೆ ಮಾಡಿ:
ಬೆಂಗಳೂರು - 080 37230333, 080 35073966

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಸರ್ಕಾರ ಕುಸಿದುಬೀಳುವ ಹಂತದಲ್ಲಿದೆ ಎಂದು ಕಿಡಿಕಾರಿದ ಪ್ರಮೋದ್ ಮುತಾಲಿಕ್