Select Your Language

Notifications

webdunia
webdunia
webdunia
Sunday, 6 April 2025
webdunia

ವಿದ್ಯಾರ್ಥಿಗಳನ್ನು ಗ್ರಂಥಾಲಯದಲ್ಲಿ ಬಂಧಿಸಿದ ಶಿಕ್ಷಕರು!

ಶಾಲಾ ಶುಲ್ಕ
ಭುವನೇಶ್ವರ್ , ಗುರುವಾರ, 25 ಆಗಸ್ಟ್ 2022 (12:18 IST)
ಭುವನೇಶ್ವರ್ : ಶಾಲಾ ಶುಲ್ಕವನ್ನು ಪಾವತಿಸದ 34 ವಿದ್ಯಾರ್ಥಿಗಳನ್ನು 5 ಗಂಟೆಗಳ ಕಾಲ ಶಾಲಾ ಗ್ರಂಥಾಲಯದಲ್ಲಿ ಬಂಧಿಸಿದ ಘಟನೆ ಓಡಿಶಾದ ಭುವೇನಶ್ವರ ನಗರದ ಖಾಸಗಿ ಶಾಲೆಯಲ್ಲಿ ನಡೆದಿದೆ.

ಶುಲ್ಕ ಪಾವತಿಸದ 3 ರಿಂದ 9 ನೇ ತರಗತಿಯ 34 ವಿದ್ಯಾರ್ಥಿಗಳನ್ನು ಗ್ರಂಥಾಲಯಕ್ಕೆ ಬರಲು ಶಿಕ್ಷಕರು ತಿಳಿಸಿದ್ದಾರೆ. ಇದಾದ ನಂತರ ಅಲ್ಲೇ 5 ಗಂಟೆಗಳ ಕಾಲ ಅವರನ್ನು ಬಂಧಿಸಿ ಗ್ರಂಥಾಲಯದ ಕೋಠಡಿಗೆ ಬೀಗ ಹಾಕಿದ್ದಾರೆ.

ಘಟನೆಗೆ ಸಂಬಂಧಿಸಿ ಪೋಷಕರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು. ಅಷ್ಟೇ ಅಲ್ಲದೇ ಪ್ರಸಕ್ತ ಶೈಕ್ಷಣಿಕ ಅವಧಿಯಲ್ಲಿ ಶಾಲಾ ಅಧಿಕಾರಿಗಳು ಶಾಲಾ ಶುಲ್ಕವನ್ನು ಶೇ. 20ರಷ್ಟು ಹೆಚ್ಚಿಸಿದ್ದಾರೆ ಎಂದು ಪೋಷಕರು ಆರೋಪಿಸಿದರು.

 
ಅಲ್ಲದೆ, ಶಾಲೆಯ ಕ್ರಮದಿಂದ ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ತೊಂದರೆ ಉಂಟಾಗಿದ್ದು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 

 

Share this Story:

Follow Webdunia kannada

ಮುಂದಿನ ಸುದ್ದಿ

ಬಿಪಿಎಲ್ ಪಡಿತರ ಮೇಲಿನ ಕ್ರಮಕ್ಕೆ ಬ್ರೇಕ್!