Publish Date: Sat, 20 Jan 2024 (14:22 IST)
Updated Date: Sat, 20 Jan 2024 (14:48 IST)
ಬೆಂಗಳೂರು-ಫೆಡೆಕ್ಸ್ ಕೊರಿಯರ್ ಹೆಸರಿನಲ್ಲಿ ವ್ಯಕ್ತಿಗೆ ವಂಚನೆ ನಡೆದಿದೆ.4 ಲಕ್ಷ 98 ಸಾವಿರ ಹಣ ಸಂತ್ರಸ್ಥ ಅಮಿತ್ ಕಳೆದುಕೊಂಡಿದ್ದ.ಜನವರಿ ೧೭ ರಂದು ಫೆಡೆಕ್ಸ್ ಹೆಸರಲ್ಲಿ ಮಹಿಳೆ ಕರೆ ಮಾಡಿದ್ದಳು.ನಿಮ್ಮ ಹೆಸರಿನ ಪಾರ್ಸಲ್ ನಲ್ಲಿ ಡ್ರಗ್ಸ್ ಇದೆ ಎಂದು ಲೀ ಕಿಮ್ ಚಿಂಗ್ ಎಂಬುವರು ಹೇಳಿದ್ದಾರೆ ಎಂದಿದ್ದಳು ನಂತರ ಮುಂಬೈ ಸೈಬರ್ ಸೆಲ್ ಹೆಸರಿನಲ್ಲಿ ಕರೆ ಮಾಡಿದ್ದ ಮತ್ತೊಬ್ಬ ಆಸಾಮಿ ನಿಮ್ಮ ಹೆಸರು ಬರಬಾರದು ಎಂದರೆ ಹಣ ಹಾಕುವಂತೆ ಹೇಳಿದ್ದ ಆತನ ಮಾತಿನಂತೆ ಅಮಿತ್ ಹಣ ಹಾಕಿದ್ದ.ಘಟನೆ ಸಂಬಂಧ ಆಗ್ನೇಯ ವಿಭಾಗ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.