Publish Date: Fri, 19 Jan 2024 (20:19 IST)
Updated Date: Fri, 19 Jan 2024 (18:23 IST)
ಬೆಂಗಳೂರು: ಸಿಎಂ ಸಿದ್ರಾಮಯ್ಯ ಅವರನ್ನು ನಾವು ಮಸೀದಿಯಲ್ಲಿ ನೋಡಿದ್ದೇವೆ. ದರ್ಗಾದಲ್ಲಿ ನೋಡಿದ್ದೇವೆ ಆದರೆ ಒಂದು ಬಾರಿಯಾದರೂ ಅವರು ದೇಗುಲದಲ್ಲಿ ಬಂದು ಹನುಮಾನ್ ಚಾಲೀಸಾ ಓದುವುದನ್ನು ಯಾರುದಾರೂ ನೋಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಪ್ರತಿಯೊಬ್ಬ ಕಾಂಗ್ರೆಸ್ ನಾಯಕರೂ ಸಹ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯನ್ನು ವಿರೋಧಿಸುತ್ತಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ . ರವಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಅವರ ತಲೆಯಲ್ಲಿ ಮೂರು “ಎಂ” ಗಳು ಎಂದರೆ ಮೆಕಾಲೆ, ಮಾವೋ ಮತ್ತು ಮಾರ್ಕ್ಸ್ ಬಿಟ್ಟರೆ ಬೇರೇನೂ ಇಲ್ಲ ಎಂದು ಟೀಕಿಸಿದರು.
ಈ ರಾಮ ವಿರೋಧಿತನ ಕೇವಲ ಕೆ.ಎನ್. ರಾಜಣ್ಣ ಅವರದ್ದು ಮಾತ್ರವಲ್ಲ ಎಲ್ಲ ಕಾಂಗ್ರೆಸಿಗರ ಒಳಗೂ ಮೂರು ಎಂ ಎಂಬ ಭೂತವಿದೆ ಎಂದು ಸಿ.ಟಿ. ರವಿ ಕಿಡಿಕಾರಿದ್ದು, ಭಾರತಕ್ಕೆ ಒಳಿತಾಗುವ ಎಲ್ಲವನ್ನೂ ಅವರು ವಿರೋಧಿಸುತ್ತಾರೆ ಎಂದರು.