Select Your Language

Notifications

webdunia
webdunia
webdunia
webdunia

ರಾಜ್ಯ ಸರ್ಕಾರಿ ನೌಕರಿ ಕೊಡಿಸಿವುದಾಗಿ ನಂಬಿಸಿ ವಂಚನೆ ಪ್ರಕರಣ: ಮಹಿಳಾ ಎಸ್.ಡಿ.ಎ ಅರೆಸ್ಟ್

ರಾಜ್ಯ ಸರ್ಕಾರಿ ನೌಕರಿ ಕೊಡಿಸಿವುದಾಗಿ ನಂಬಿಸಿ ವಂಚನೆ ಪ್ರಕರಣ: ಮಹಿಳಾ ಎಸ್.ಡಿ.ಎ ಅರೆಸ್ಟ್
bangalore , ಗುರುವಾರ, 30 ಸೆಪ್ಟಂಬರ್ 2021 (20:41 IST)
ಬೆಂಗಳೂರು: ಗ್ರಾಮಾಂತರ ಎಸ್ಪಿ ಕಚೇರಿಯಲ್ಲಿ ಕೆಲಸ  ನಿರ್ವಹಿಸುತ್ತಾ ರಾಜ್ಯ ಸರ್ಕಾರಿ ಕೆಲಸ ಕೊಡಿಸುವುದಾಗಿ ಜನರಿಗೆ ವಂಚಿಸುತ್ತಿದ್ದ ಮಹಿಳಾ ಸೆಕೆಂಡ್ ಡಿವಿಷನ್ ಅಸಿಸ್ಟೆಂಟ್ (ಎಸ್.ಡಿ.ಎ) ಒಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.
 
ವಿಧಾನಸೌಧ ಠಾಣೆಯಲ್ಲಿ ಎಫ್.ಐ.ಆರ್:
 
ಮಂಜುನಾಥ್ ಎಂಬುವವರು ನೀಡಿದ ದೂರಿನ ಮೇರೆಗೆ ಎಫ್.ಐ.ಆರ್ ದಾಖಲಿಸಿ ವಸಂತನಗರದಲ್ಲಿರುವ ರೂರಲ್ ಎಸ್ಪಿ ಕಚೇರಿಯಲ್ಲಿ ಸೆಕೆಂಡ್ ಡಿವಿಷನ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿರು ಶ್ರೀಲೇಖಾ ನನ್ನು ವಿಧಾನಸೌಧ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
 
ರಾಜ್ಯ ಸರ್ಕಾರಿ ನೌಕರಿಯ ಹೆಸರಲ್ಲಿ ವಂಚನೆ:
 
ಕೆ.ಎಸ್.ಆರ್.ಟಿ.ಸಿ ಡ್ರೈವರ್, ಕಂಡಕ್ಟರ್, ಎಫ್.ಡಿ.ಎ, ಎಸ್.ಡಿ.ಎ, ಕೆ.ಪಿ.ಎಸ್.ಇ ಸೇರಿ ರಾಜ್ಯ ಸರ್ಕಾರದ ಎಲ್ಲಾ ವಿಭಾಗದಲ್ಲೂ ಕೆಲಸ ಕೊಡಿಸುವುದಾಗಿ ಈಕೆ ವಂಚಿಸುತ್ತಿದ್ದಳು ಎಂದು ತಿಳಿದು ಬಂದಿದೆ.
 
ಮೂವರ ಕಾಂಬೋ: 
 
ಈಕೆಗೆ ರಾಧಾ ಉಮೇಶ್ ಮತ್ತು ಸಂಪತ್ ಕುಮಾರ್ ಇಬ್ಬರೂ ಸಾಥ್ ನೀಡುತ್ತಿದ್ದರು. ಮೂವರು ಸರ್ಕಾರಿ ಕೆಲಸ ಕೊಡಿಸುವುದಾಗಿ ಹಲವರಿಗೆ ಸುಮಾರು 1.61 ಕೋಟಿ ರೂ ಹೆಚ್ಚು ವಂಚನೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
frad

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸರ್ಕಾರಿ ನೌಕರಿ ಆಮಿಷ ಒಡ್ಡಿ ವಂಚನೆ ಪ್ರಕರಣ