Publish Date: Thu, 30 Sep 2021 (17:50 IST)
Updated Date: Thu, 30 Sep 2021 (17:51 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಪುರುಷರ ಹಾಕಿ ತಂಡದ ಸದಸ್ಯ ಬಿರೇಂದರ್ ಲಕ್ರಾ ಹಾಕಿಗೆ ನಿವೃತ್ತಿ ಘೋಷಿಸಿದ್ದಾರೆ.
ಇದಕ್ಕೂ ಮೊದಲು ಇನ್ನೊಬ್ಬ ಸದಸ್ಯ ರೂಪಿಂದರ್ ಪಾಲ್ ಸಿಂಗ್ ನಿವೃತ್ತಿ ಘೋಷಿಸಿದ್ದರು. ಬಿರೇಂದರ್ 201 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಡಿಫೆಂಡರ್ ಆಗಿ ಆಟವಾಡಿದ್ದರು.
ಒಡಿಶಾ ಮೂಲದ 31 ವರ್ಷದ ಬಿರೇಂದರ್ ನಿವೃತ್ತಿ ವಿಚಾರವನ್ನು ಪ್ರಕಟಿಸಿರುವ ಹಾಕಿ ಇಂಡಿಯಾ ಅವರ ಮುಂದಿನ ಜೀವನಕ್ಕೆ ಶುಭ ಕೋರಿದೆ. ಒಲಿಂಪಿಕ್ ಅಲ್ಲದೆ 2014 ರಲ್ಲಿ ಚಿನ್ನದ ಪದಕ ಗೆದ್ದಿ ಹಾಕಿ ತಂಡವನ್ನೂ ಅವರು ಪ್ರತಿನಿಧಿಸಿದ್ದರು.