19 ವರ್ಷದ ಮನೀಶ್ ನರ್ವಾಲ್ ಟೋಕಿಯೊ ಒಲಿಂಪಿಕ್ಸ್ ನ 50 ಮೀ. ಎಸ್ ಎಚ್1 ವಿಭಾಗದಲ್ಲಿ ಚಿನ್ನದ ಪದಕದ ಸಾಧನೆ ಮಾಡಿದರೆ, ಸಿಂಗ್ ರಾಜ್ ಬೆಳ್ಳಿ ಪದಕ ಗೆದ್ದು ಒಂದೇ ಒಲಿಂಪಿಕ್ಸ್ ನಲ್ಲಿ ಎರಡು ಪದಕ ಗೆದ್ದ ದಾಖಲೆ ಬರೆದಿದ್ದಾರೆ.
ಶನಿವಾರ ನಡೆದ ಫೈನಲ್ ನಲ್ಲಿ ಮನೀಷ್ ನರ್ವಾಲ್ 218.2 ಅಂಕ ಗಳಿಸಿ ಚಿನ್ನದ ಪದಕಕ್ಕೆ ಗುರಿ ಇಟ್ಟರೆ, ಸಿಂಗ್ ರಾಜ್ 216.7 ಅಂಕದೊಂದಿಗೆ ಬೆಳ್ಳಿ ಪದಕ ಗೆದ್ದು ಒಂದೇ ಒಲಿಂಪಿಕ್ಸ್ ನಲ್ಲಿ ಎರಡು ಪದಕ ಗೆದ್ದ ಮೊದಲಿಗ ಎಂಬ ಗೌರವಕ್ಕೆ ಪಾತ್ರರಾದರು. ಇದಕ್ಕೂ ಮುನ್ನ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದ ಗೆದ್ದಿದ್ದರು.