Select Your Language

Notifications

webdunia
webdunia
webdunia
webdunia

ಬೆಂಗಳೂರು ಗ್ರಾಮಾಂತರದಲ್ಲಿ ಮಂಜುನಾಥ್ ಹೆಸರಿನ ನಾಲ್ವರು, ಸುರೇಶ್ ಹೆಸರಿನ ಮೂವರು ಕಣಕ್ಕೆ

LokhSabha Election 2024

Sampriya

ರಾಮನಗರ , ಶುಕ್ರವಾರ, 5 ಏಪ್ರಿಲ್ 2024 (11:35 IST)
ರಾಮನಗರ: ದೇಶದ ಗಮನ ಸೆಳೆದಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಗಳು ನಿನ್ನೆ ನಾಮಪತ್ರ ಸಲ್ಲಿಕೆಯನ್ನು ನಡೆಸಿದ್ದಾರೆ. ಇದೀಗ ಈ ಕ್ಷೇತ್ರದಲ್ಲಿ ಸುರೇಶ್ ಹೆಸರಿನ ಮೂವರು ಹಾಗೂ ಮಂಜುನಾಥ್ ಹೆಸರಿನ ಐವರು ಕಣದಲ್ಲಿದ್ದಾರೆ.

ಗುರುವಾರ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ. ಸುರೇಶ್, ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್, ಕರುನಾಡು ಪಾರ್ಟಿಯಿಂದ ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರಿನ ಸುರೇಶ್ ಎಸ್. ಹಾಗೂ ಪಕ್ಷೇತರರಾಗಿ ಕನಕಪುರ ತಾಲ್ಲೂಕಿನ ಮರಳೆ ಗ್ರಾಮದ ಸುರೇಶ್ ಎಂ.ಎನ್ ನಾಮಪತ್ರ ಸಲ್ಲಿಸಿದ್ದಾರೆ.

ಇನ್ನೂ ವಿಶೇಷ ಎಂಬಂತೆ  ಡಾ. ಸಿ.ಎನ್. ಮಂಜುನಾಥ್ ಹೆಸರಿನ ಇತರ ನಾಲ್ವರು ಉಮೇದುವಾರಿಕೆ ಸಲ್ಲಿಸಿರುವುದು ವಿಶೇಷವಾಗಿದೆ.

ಬಹುಜನ್ ಭಾರತ್ ಪಾರ್ಟಿಯಿಂದ ಮಂಜುನಾಥ ಸಿ.ಎನ್. ಬುಧವಾರ ನಾಮಪತ್ರ ಸಲ್ಲಿಸಿದ್ದರು. ಪಕ್ಷೇತರರಾಗಿ ಮಂಜುನಾಥ್ ಸಿ., ಮಂಜುನಾಥ್ ಎನ್. ಹಾಗೂ ಮಂಜುನಾಥ್ ಕೆ. ಎಂಬುವರು ಗುರುವಾರ ನಾಮಪತ್ರ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್ ಸ್ಪರ್ಧಿಗಳ ಹೆಸರಿನಲ್ಲಿ ಗೊಂದಲ ಸೃಷ್ಟಿಸಲು ಈ ರೀತಿ ಒಂದೇ ಹೆಸರಿನವರಲ್ಲಿ ನಾಮಪತ್ರ ಸಲ್ಲಿಕೆ ಮಾಡಲಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಲಬುರಗಿಯಲ್ಲಿ 44.4 ಡಿಗ್ರಿ ಸೆಲ್ಸಿಯಸ್‌ ದಾಖಲು: ರಾಜಧಾನಿಯಲ್ಲೂ ದಾಖಲೆ ಉಷ್ಣಾಂಶ