Select Your Language

Notifications

webdunia
webdunia
webdunia
webdunia

ಯಮುನಾ ನದಿಗೆ ಪೂಜೆ ಮಾಡಿ ನಾಮಪತ್ರ ಸಲ್ಲಿಸಿದ ನಟಿ ಹೇಮಾ ಮಾಲಿನಿ

LokhSabha Election 2024

Sampriya

ಮಥುರಾ , ಗುರುವಾರ, 4 ಏಪ್ರಿಲ್ 2024 (17:15 IST)
‌‌ಮಥುರಾ: ಮಥುರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ,  ನಟಿ ಹಾಗೂ ಸಂಸದೆ ಹೇಮಾ ಮಾಲಿನಿ ಅವರು ಇಂದು  ನಾಮಪತ್ರ ಸಲ್ಲಿಸಿದರು.

ಮಥುರಾ ಲೋಕಸಭಾ ಕ್ಷೇತ್ರದಿಂದ 3ನೇ ಬಾರಿ ಕಣಕ್ಕೆ ಇಳಿದಿರುವ ಅವರು, 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಥುರಾ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಈ ಬಾರಿಯೂ ಸ್ಪರ್ಧಿಸುತ್ತಿದ್ದೇನೆ. ಇನ್ನೂ ಯಮುನಾ ನದಿ ಸ್ವಚ್ಛತಾ ಕಾರ್ಯದ ಬಗ್ಗೆ ಪ್ರತಿಕ್ರಿಯಿಸಿದ ಅವರು ಕಳೆದ 50 ವರ್ಷಗಳಿಂದ ಮಾಡಲಾಗದ ಕೆಲಸವನ್ನು 10 ವರ್ಷದಲ್ಲಿ ನಾವು ಮಾಡಿದ್ದೇವೆ ಎಂದರು.  


ಹೇಮಾ ಮಾಲಿನಿ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಚಿವ ಸ್ವತಂತ್ರ ದೇವ್ ಸಿಂಗ್ ಇದ್ದರು. ಲೋಕಸಭೆ ಚುನಾವಣೆಯ ಎರಡನೇ ಹಂತವಾದ ಏಪ್ರಿಲ್ 26 ರಂದು ಮಥುರಾದಲ್ಲಿ ಮತದಾನ ನಡೆಯಲಿದೆ. ಎರಡನೇ ಹಂತದ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು ಇಂದು ಕೊನೆ ದಿನವಾಗಿದೆ.


Photo Courtesy X

Share this Story:

Follow Webdunia kannada

ಮುಂದಿನ ಸುದ್ದಿ

ಮಗುವಿನ ರಕ್ಷಣೆ ಬೆನ್ನಲ್ಲೇ ಜಿಲ್ಲೆಯ ತೆರೆದ ಬೋರ್‌ವೆಲ್ ಸರ್ವೆಗೆ ಸೂಚಿಸಿದ ಎಂ ಬಿ ಪಾಟೀಲ್