Select Your Language

Notifications

webdunia
webdunia
webdunia
webdunia

ಜನರು ಮತ್ತೆ ಬಿಜೆಪಿ ಮೇಲೆ ನಂಬಿಕೆಯಿಡುತ್ತಾರೆ: ಪ್ರಧಾನಿ ಮೋದಿ ವಿಶ್ವಾಸ

ಜನರು ಮತ್ತೆ ಬಿಜೆಪಿ ಮೇಲೆ ನಂಬಿಕೆಯಿಡುತ್ತಾರೆ: ಪ್ರಧಾನಿ ಮೋದಿ ವಿಶ್ವಾಸ

Sampriya

ನವದೆಹಲಿ , ಗುರುವಾರ, 4 ಏಪ್ರಿಲ್ 2024 (12:26 IST)
ನವದೆಹಲಿ: ಇಂದು ಸಂಜೆ 3.30ಕ್ಕೆ ಪಶ್ಚಿಮ ಬಂಗಾಳದ ಕೂಚ್ ಬೆಹಾರ್‌ದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ ಅವರು, ಅದಕ್ಕೂ ಮುನ್ನಾ ಎಕ್ಸ್‌ ಖಾತೆಯಲ್ಲಿ ಕ್ಷೇತ್ರದ ಜನರು ಮತ್ತೊಮ್ಮೆ ಭಾರತೀಯ ಜನತಾ ಪಕ್ಷದ ಮೇಲೆ ನಂಬಿಕೆ ಇಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದು ಸಂಜೆ ನಡೆಯುವ  ಪಶ್ಚಿಮ ಬಂಗಾಳದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಕೂಚ್ ಬೆಹರ್‌ನ ಜನರ ನಡುವೆ ಇರಲು ನಾನು ಎದುರು ನೋಡುತ್ತಿದ್ದೇನೆ. ಅಲ್ಲಿನ ಜನರು ನಮ್ಮ ಅಭಿವೃದ್ಧಿ ಕಾರ್ಯಸೂಚಿಯನ್ನು ಹೆಚ್ಚು ಬೆಂಬಲಿಸಿದ್ದಾರೆ ಮತ್ತು ಅವರು ಮತ್ತೊಮ್ಮೆ ತಮ್ಮ ನಂಬಿಕೆಯನ್ನು ಇರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಬರೆದುಕೊಂಡಿದ್ದಾರೆ.

ಕೂಚ್ ಬಿಹಾರ್ ನಿಂದ ಹಾಲಿ ಸಂಸದ ಮತ್ತು ಬಿಜೆಪಿ ನಾಯಕ ನಿಸಿತ್ ಪ್ರಮಾಣಿಕ್ ಅವರನ್ನು ಲೋಕಸಭೆ ಚುನಾವಣೆಗೆ ಬಿಜೆಪಿ ನಿಲ್ಲಿಸಿದೆ.

ಉತ್ತರ ಬಂಗಾಳದಲ್ಲಿರುವ ಕೂಚ್ ಬೆಹಾರ್ ಮತ್ತು ರಾಜ್ಯದ ಅಲಿಪುರ್ದೂರ್ ಮತ್ತು ಜಲಪೈಗುರಿ ಮೂರು ಕ್ಷೇತ್ರಗಳು ಏಪ್ರಿಲ್ 19 ರಂದು ಲೋಕಸಭೆ ಚುನಾವಣೆಯ ಏಳು ಹಂತಗಳಲ್ಲಿ ಮೊದಲ ಬಾರಿಗೆ ಮತದಾನ ನಡೆಯಲಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಕೊಳೆವೆ ಬಾವಿಯಲ್ಲಿ ಅಳುತ್ತಿರುವ ಮಗು, ನಾಡಿನದ್ಯಂತ ಜನರಿಂದ ಪ್ರಾರ್ಥನೆ