ವಿಜಯಪುರ: ಕೊಳವೆ ಬಾವಿಯಲ್ಲಿ ಸಿಲುಕಿರುವ 14 ತಿಂಗಳ ಮಗು ಸಾತ್ವಿಕನ ಹೊರ ತೆಗೆಯುವ ರಕ್ಷಣಾ ಕಾರ್ಯಾಚರಣೆ ಸಾಗುತ್ತಿದ್ದು, ಮಗು ಆಳುವ ಧ್ವನಿ ಕೇಳುತ್ತಿದ್ದು, ಸುರಕ್ಷಿತವಾಗಿ ಹೊರಬರಲಿ ಎಂದು ನಾಡಿನಾದ್ಯಂತ ಜನರು ಪ್ರಾರ್ಥಿಸುತ್ತಿದ್ದಾರೆ.
ಸದ್ಯ ಮಗು ಇರುವ ಸ್ಥಳಕ್ಕೆ ತಲುಪಿದ ರಕ್ಷಣಾ ತಂಡ ಇನ್ನೇನು ಮಗುವನ್ನು ಕೆಲವೇ ನಿಮಿಷಗಳಲ್ಲಿ ಹೊರತೆಗೆಯಲಿದೆ.
ಹೊರತೆಗೆದ ಕೂಡಲೇ ಮಗುವಿನ ಆರೈಕೆಗೆ ಆ್ಯಂಬುಲೆನ್ಸ್ ಹಾಗೂ ವೈದ್ಯರ ತಂಡ ಸಿದ್ಧವಾಗಿದೆ. ಸತತ 16 ಗಂಟೆಗಳ ನಂತರ ಬಳಿಕ ಮಗು ಇರುವ ಸ್ಥಳಕ್ಕೆ ಕಾರ್ಯಚರಣೆ ತಂಡ ತಲುಪಿದೆ.
ಇನ್ನೂ ಮಗುವಿನ ರಕ್ಷಣಾ ಕಾರ್ಯಚರಣೆ ನೋಡಲು ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ತಂಡೋಪತಂಡವಾಗಿ ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಜನರ ನೂಕು ನುಗ್ಗಲಿಂದ ಕಾರ್ಯಾಚರಣೆಗೆ ತೊಂದರೆಯಾಗುತ್ತಿರುವುದಂದ ಪೊಲೀಸರು ಆಗಾಗ ಲಾಟಿ ಬೀಸಿ, ಜನರನ್ನು ಚದುರಿಸುತ್ತಿದ್ದಾರೆ. ಇಷ್ಟಾದರೂ ಜನರ ಕುತೂಹಲ ತಣಿದಿಲ್ಲ. ಇದರಿಂದ ಪೊಲೀಸರಿಗೆ ತಲೆ ಬಿಸಿಯಾಗಿದೆ.