Publish Date: Wed, 03 Apr 2024 (17:03 IST)
Updated Date: Wed, 03 Apr 2024 (17:06 IST)
ಮೈಸೂರು: ಇಂದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರು ಬೃಹತ್ ರೋಡ್ ಶೋ ನಂತರ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಇನ್ನೂ ಮೆರವಣಿಗೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಯದುವೀರ್ ಅವರಿಗೆ ಸಾಥ್ ನೀಡಿ, ಅತೀ ಹೆಚ್ಚು ಮತ ನೀಡಿ ಮೋದಿ ಮತ್ತೊಮ್ಮೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಬೇಕೆಂದರು. ಸಾವಿರಾರು ಬಿಜೆಪಿ ಕಾರ್ಯಕರ್ತರು ಘೊಷಣೆ ಕೂಗುತ್ತಾ ಬೆಂಬಲ ಸೂಚಿಸಿದರು.
ಇನ್ನು ನಾಮಪತ್ರ ಸಲ್ಲಿಕೆಗೂ ಮುನ್ನಾ ಯದುವೀರ್ ಅವರು ತಾಯಿ ಪ್ರಮೋದಾ ದೇವಿ ಜತೆ ದೇವರ ಆಶೀರ್ವಾದವನ್ನು ಪಡೆದರು.
ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರು, ಸಂಸದ ಪ್ರತಾಪ್‌ಸಿಂಹ ಇದ್ದರು.