Select Your Language

Notifications

webdunia
webdunia
webdunia
webdunia

ಮುಂದಿನ 5 ವರ್ಷನೂ ಸಿದ್ದರಾಮಯ್ಯನವರೇ ಸಿಎಂ: ಎಚ್‌.ಆಂಜನೇಯ

Anjaneya

Sampriya

ಚಿತ್ರದುರ್ಗ , ಮಂಗಳವಾರ, 2 ಏಪ್ರಿಲ್ 2024 (20:58 IST)
Photo Courtesy X
ಚಿತ್ರದುರ್ಗ: ಮುಂದಿನ 5 ವರ್ಷನೂ ಸಿದ್ದರಾಮಯ್ಯ ಅವರೇ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಚಲಾಯಿಸಲಿದ್ದಾರೆ ಎಂದು ಮಾಜಿ ಸಚಿವ ಎಚ್‌.ಆಂಜನೇಯ ಹೇಳಿದರು.

ಲೋಕಸಭಾ ಚುನಾವಣೆಯ ಬಳಿಕ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಅವರು ಶೋಷಿತ ಸಮುದಾಯಗಳ ಹೃದಯ ಸಿಂಹಾಸನದಲ್ಲಿರುವ ಜನನಾಯಕ. ಬಡ ಸಮುದಾಯಕ್ಕೆ ಅವರು ಸಾಕಷ್ಟು ಉಪಕಾರ ಮಾಡಿದ್ದಾರೆ ಎಂದು ಅವರ ಗುಣಗಾನಮಾಡಿದರು.

ಇನ್ನೂ ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಏಳಿಗೆಗೆ ಶ್ರಮಿಸಿದ್ದಾರೆ. ರಾಜ್ಯದ ಜನರು ಅವರ ಕೈಬಿಡುವುದಿಲ್ಲ ಎಂದರು.

ಇನ್ನೂ ವರುಣಾದಲ್ಲಿ ಕೈ ಬಲಪಡಿಸುವಂತೆ ಕೇಳಿದ್ದು ತಪ್ಪೇನೂ ಇಲ್ಲ. ಎಲ್ಲರು ಹೆಚ್ಚು ಮತ ನೀಡಿ ಕಾಂಗ್ರೆಸ್‌ನ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ ಅವರಿಗೆ ಶಕ್ತಿ ನೀಡಿದರೆ ಬಡವರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮ ಹಣ ವರ್ಗಾವಣೆ: ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ವಿರುದ್ಧ ದೂರು