Select Your Language

Notifications

webdunia
webdunia
webdunia
webdunia

ವಿಜಯೇಂದ್ರರನ್ನು ಬಲಾಯಿಸಿದರೆ ನಾಳೆಯೇ ಚುನಾವಣಾ ಕಣದಿಂದ ಹಿಂದೆ ಸರಿಯುತ್ತೇನೆ: ಕೆ.ಎಸ್‌. ಈಶ್ವರಪ್ಪ

ವಿಜಯೇಂದ್ರರನ್ನು ಬಲಾಯಿಸಿದರೆ ನಾಳೆಯೇ ಚುನಾವಣಾ ಕಣದಿಂದ ಹಿಂದೆ ಸರಿಯುತ್ತೇನೆ: ಕೆ.ಎಸ್‌. ಈಶ್ವರಪ್ಪ

Sampriya

ಶಿವಮೊಗ್ಗ , ಮಂಗಳವಾರ, 2 ಏಪ್ರಿಲ್ 2024 (16:42 IST)
Photo Courtesy X
ಶಿವಮೊಗ್ಗ: ಕೇಂದ್ರ ಸಚಿವ ಅಮಿತ್ ಶಾ ಕರೆ ಮಾಡಿ ಪಕ್ಷೇತರರವಾಗಿ ಸ್ಪರ್ಧೆ ಮಾಡದಂತೆ ಕೇಳಿಕೊಂಡರು. ರಾಜ್ಯದ ಅಧ್ಯಕ್ಷರನ್ನು ಬದಲಾವಣೆ ಮಾಡಿದರೆ ನಾಳೆಯೇ ಕಣದಿಂದ ಹಿಂದೆ ಸರಿಯುವುದಾಗಿ ಹೇಳಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ನನಗೆ ಕರೆ ಮಾಡಿ ದೆಹಲಿಗೆ ಬುಧವಾರ ಬರುವಂತೆ ಸೂಚಿಸಿದ್ದಾರೆ. ಆದರೆ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವಂತೆ ಸೂಚಿಸಬಾರದು ಎಂದು ಅವರಲ್ಲಿ ಕೇಳಿಕೊಂಡಿದ್ದೇನೆ ಎಂದರು.

ಇನ್ನೂ ನನ್ನ ಸ್ಪರ್ಧೇ ಬಗ್ಗೆ ಶಾ ಅವರು ಮಾತನಾಡಿ, ಚುನಾವಣೆಯಿಂದೆ ಹಿಂದೆ ಸರಿಯುವಂತೆ ಕೇಳಿಕೊಂಡರು.  ಅದಕ್ಕೆ ನಾನು ಕೂಡ ಸ್ಪಷ್ಟವಾಗಿ ಹೇಳಿದ್ದೇನೆ. ರಾಜ್ಯ ಬಿಜೆಪಿಯಲ್ಲಿ ಕಾಂಗ್ರೆಸ್​ ಸಂಸ್ಕೃತಿ ಬೆಳೆಯುತ್ತಿದೆ. ಕರ್ನಾಟಕದಲ್ಲಿ ಒಂದು ಕುಟುಂಬದ ಕೈಯಲ್ಲಿ ಪಕ್ಷವಿದೆ. ಅದನ್ನು ಮುಕ್ತಿಗೊಳಿಸಬೇಕು ಎಂದು ಹೇಳಿದ್ದೇನೆ.

ಇನ್ನೂ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಯಾವತ್ತೂ ಬೊಗಲೆ ಬಿಟ್ಟುಕೊಂಡೆ ಬಂದಿದ್ದಾರೆ. ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನದಲ್ಲೂ ಗೆಲ್ಲಲ್ಲ ಎಂದಿದ್ದರು. ಆದರೆ ಅದು ಉಲ್ಟಾ ಆಯಿತು. ಕಾಂಗ್ರೆಸ್ ಒಂದು ಕೇತ್ರದಲ್ಲಿ ಮಾತ್ರ ಗೆಲುವು ಪಡೆದುಕೊಂಡಿತು. ಈ ಬಾರಿಯೂ 27 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಒಂದು ಕ್ಷೇತ್ರದಲ್ಲಿ ಪಕ್ಷೇತರವಾಗಿ ನಿಲ್ಲುವ ನಾನು ಗೆಲ್ಲಬೇಕು ಎಂದರು.

ಈ ದೇಶದ ಜನ ನರೇಂದ್ರ ಮೋದಿ ಬಿಟ್ಟರೆ ಬೇರೆ ಯಾರನ್ನೂ ಪ್ರಧಾನಿ ಸ್ಥಾನದಲ್ಲಿ ನೋಡಲು ಇಚ್ಛಿಸುವುದಲ್ಲಿ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಬಕಾರಿ ನೀತಿ ಹಗರಣ: 6ತಿಂಗಳಿನಿಂದ ಜೈಲಿನಲ್ಲಿದ್ದ ಎಎಪಿ ಸಂಸದ ಸಂಜಯ್‌ ಸಿಂಗ್‌ಗೆ ಬಿಡುಗಡೆ ಭಾಗ್ಯ