Publish Date: Thu, 04 Apr 2024 (15:46 IST)
Updated Date: Thu, 04 Apr 2024 (15:52 IST)
ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಅವರು ಇಂದು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಮಂಜುನಾಥ್ ಅವರು, ಕಾರ್ಯಕರ್ತರ ಉತ್ಸಾಹ ನೋಡಿದರೆ, ಗೆಲುವು ಖಚಿತ ಎನ್ನಿಸುತ್ತಿದೆ. ಅಮಿತ್ ಶಾ ಕೂಡಾ ಆಗಮಿಸಿ ನನ್ನ ಪರ ರೋಡ್ ಶೋ ಮಾಡಿದ್ದಾರೆ. ಇದರಿಂದ ನಮ್ಮ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ. ಎರಡೂ ಪಕ್ಷಗಳ ಕಾರ್ಯಕರ್ತರ ಹೃದಯ ಒಂದಾಗಿದೆ. ನನ್ನ ಗೆಲುವಿಗಾಗಿ ಎರಡೂ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಮತದಾರರು ಯಾವುದೇ ತಂತ್ರ, ಕುತಂತ್ರಕ್ಕೆ ಮಣೆ ಹಾಕುವುದಿಲ್ಲ. ಜನ ಬುದ್ಧಿವಂತರಿದ್ದಾರೆ, ಆಮೀಷಗಳಿಗೆ ಬಲಿಯಾಗದೇ ನನ್ನನ್ನ ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ, ಅಶ್ವಥ್ ನಾರಾಯಣ್, ಮುನಿರತ್ನ ಹಾಗೂ ಡಾ.ಮಂಜುನಾಥ್ ಪೂಜೆ ಸಲ್ಲಿಸಿ, ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಈ ವಳೇ ಪತ್ನಿ ಅನುಸೂಯ, ಎಮ್.ಕೃಷ್ಣಪ್ಪ ಹಾಗೂ ಚಿಂತಕಿ ಸುಧಾ ಬರಗೂರು ಸಾಥ್ ನೀಡಿದರು.
ಇನ್ನೂ ನಾಮಪತ್ರಿಕೆಗೆ ತಡವಾಗುವ ನಿಟ್ಟಿನಲ್ಲಿ ಮೆರವಣಿಗೆ ರದ್ದು ಮಾಡಿದ್ದರು ಸಾವಿರಾರು ಸಂಖ್ಯೆಯಲ್ಲಿ ಮೈತ್ರಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.