Select Your Language

Notifications

webdunia
webdunia
webdunia
webdunia

ದಿ ಕೇರಳ ಸ್ಟೋರಿ ಸಿನಿಮಾ ಪ್ರಸಾರಕ್ಕೆ ಬ್ರೇಕ್‌ ಹಾಕಿ: ದೂರದರ್ಶನಕ್ಕೆ ಕೇರಳ ಸಿಎಂ ಪಿಣರಾಯಿ ಕಟ್ಟಪ್ಪಣೆ

ದಿ ಕೇರಳ ಸ್ಟೋರಿ ಸಿನಿಮಾ ಪ್ರಸಾರಕ್ಕೆ ಬ್ರೇಕ್‌ ಹಾಕಿ: ದೂರದರ್ಶನಕ್ಕೆ ಕೇರಳ ಸಿಎಂ ಪಿಣರಾಯಿ ಕಟ್ಟಪ್ಪಣೆ

Sampriya

ತಿರುವನಂತಪುರ , ಶುಕ್ರವಾರ, 5 ಏಪ್ರಿಲ್ 2024 (10:42 IST)
Photo Courtesy X
ತಿರುವನಂತಪುರ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಲಯಾಳಂನ ದಿ ಕೇರಳ ಸ್ಟೋರಿ ಸಿನಿಮಾವನ್ನು ದೂರದರ್ಶನದಲ್ಲಿ ಪ್ರಸಾರವನ್ನು ತಡೆಹಿಡಿಯುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸೂಚಿಸಿದ್ದಾರೆ.

ಲೋಕಸಭೆ ಚುನಾವಣೆ ಸನ್ನಿಹಿತವಾಗಿರುವ ಕಾರಣ ಈ ಸಿನಿಮಾ ಪ್ರಸಾರದಿಂದ ಜನರಲ್ಲಿ ಕೋಮು ಉದ್ವಿಗ್ನತೆ ಉಲ್ಬಣಗೊಳ್ಳಬಹುದು, ಅಲ್ಲದೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಪ್ರಚಾರ ಯಂತ್ರ ಆಗಬೇಡಿ, ಈ ಸಿನಿಮಾ ಪ್ರಸಾರ ಮಾಡುವ ನಿರ್ಧಾರವನ್ನು ಹಿಂತೆಗೆದುಕೊಳ್ಳಿ ಎಂದು ಡಿಡಿ ನ್ಯಾಷನಲ್‌ ಬಳಿ ಪಿಣರಾಯಿ ಕೇಳಿದ್ದಾರೆ.

ದಿ ಕೇರಳ ಸ್ಟೋರಿ ಸಿನಿಮಾ ಪ್ರಸಾರದ ನಿರ್ಧಾರದಿಂದ ಹಿಂದೆ ಸರಿಯಿರಿ. ಜನರ ಮನಸ್ಸಿನಲ್ಲಿ ದ್ವೇಷ ತುಂಬುವ ಇಂತಹ ಚಲನಚಿತ್ರಗಳ ಪ್ರದರ್ಶನ ಖಂಡನೀಯ. ಇಂತಹ ದುರುದ್ದೇಶಪೂರಿತ ಪ್ರಯತ್ನಗಳನ್ನು ವಿರೋಧಿಸುವಲ್ಲಿ ಕೇರಳ ದೃಢವಾಗಿ ನಿಲ್ಲುತ್ತದೆ ಎಂದು  ಎಕ್ಸ್‌ನಲ್ಲಿ ಅವರು ಬರೆದುಕೊಂಡಿದ್ದಾರೆ.

ದಿ ಕೇರಳ ಸ್ಟೋರಿ ಚಿತ್ರವು ದೇಶದಾದ್ಯಂತ ಸಂಚಲನ ಮೂಡಿಸಿತ್ತು. ಲವ್ ಜಿಹಾದ್‌ಗೆ ಸಂಬಂಧಿಸಿದ ಚಿತ್ರಕಥೆಯನ್ನು ಈ ಚಿತ್ರ ಹೊಂದಿದೆ ಎನ್ನಲಾಗಿದ್ದು, ‌ಏಪ್ರಿಲ್‌ 5 ರಂದು ಈ ಸಿನಿಮಾವನ್ನು ಪ್ರಸಾರ ಮಾಡುವುದಾಗಿ ದೂರದರ್ಶನ ಹೇಳಿಕೊಂಡಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಮಗು ದತ್ತು ಪಡೆದ ಪ್ರಕರಣ: ನಟಿ ಸೋನು ಗೌಡಗೆ ಷರತ್ತು ಬದ್ಧ ಜಾಮೀನು