Publish Date: Sun, 20 Oct 2019 (13:37 IST)
Updated Date: Sun, 20 Oct 2019 (13:38 IST)
ವಿಜಯಪುರ : ಇಲಿ ಕಚ್ಚಿ ನಾಲ್ಕು ತಿಂಗಳ ಗಂಡುಮಗುವೊಂದು ಸಾವನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ನಡೆದಿದೆ.
ಗೋಲಪ್ಪ ಹಾಗು ಗೀತಾ ಮಗುವನ್ನು ಕಳೆದುಕೊಂಡ ದಂಪತಿ. ಗೀತಾ ಹಬ್ಬಕ್ಕೆಂದು ತವರಿಗೆ ಬಂದಿದ್ದ ವೇಳೆ ರಾತ್ರಿ ಮನೆಯಲ್ಲಿ ಮಗುವಿನ ಜೊತೆ ಮಲಗಿದಾಗ ಅಲ್ಲಿಗೆ ಬಂದ ಇಲಿ ಮಗುವಿನ ಬಲಗಾಲನ್ನು ಕಚ್ಚಿ ಎಳೆದಾಡಿದೆ.
ಈ ವೇಳೆ ಮಗು ನೋವಿಗೆ ಕಿರುಚಲು ಆಗದೆ ಉಸಿರುಗಟ್ಟಿ ಸಾವನಪ್ಪಿದೆ. ಹೆತ್ತ ಕಂದಮ್ಮನನ್ನು ಕಳೆದುಕೊಂಡ ಪೋಷಕರ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.