ಮಡಿಕೇರಿ ನಗರ ಮಾರುಕಟ್ಟೆ ಬಳಿ ಸಂತೆ ದಿನವಾದ ಶುಕ್ರವಾರ ವಾಹನ ನಿಲುಗಡೆ ಮಾಡಲು ಜಾಗವಿಲ್ಲದೆ ವಾಹನ ಸವಾರರು ಪರದಾಡುವ ಪರಿಸ್ಥಿತಿ ಬಂದಿದೆ ಮೊದಲು ಮಾರುಕಟ್ಟೆಯ ಮಾಂಸ ಮಳಿಗೆಯ ಪಕ್ಕದಲ್ಲಿ ಖಾಲಿ ಜಾಗವಿದು ಇಲ್ಲಿ ಕಸಕಡ್ಡಿಗಳು ಹಾಗೂ ತ್ಯಾಜ್ಯಗಳನ್ನು ಹಾಕುತ್ತಿದ್ದು ಈ ಜಾಗವನ್ನು ನಗರಸಭೆಯ ವತಿಯಿಂದ ಶುಚಿಗೊಳಿಸಿ ವಾಹನ ನಿಲುಗಡೆಗೆ ಆಕಾಶ ಮಾಡಿಕೊಟ್ಟಲ್ಲಿ ವ್ಯಾಪಾರಿಗಳಿಗೆ ಹಾಗೂ ಸಂತೆಗೆ ಬರುವ ಸಾರ್ವಜನಿಕರ ವಾಹನಗಳ ನಿಲುಗಡೆಗೆ ಅನುಕೂಲವಾಗುತ್ತದೆ ಅದೇ ರೀತಿಯಲ್ಲಿ ಮಾರುಕಟ್ಟೆಯ ಸಮೀಪದ ಟ್ರಾಫಿಕ್ ಕಿರಿಕಿರಿಯನ್ನು ತಪ್ಪಿಸ ಬಹುದು ಆದ್ದರಿಂದ ನಗರಸಭೆಯ ಅಧಿಕಾರಿಗಳು ಹಾಗೂ ಮಡಿಕೇರಿ ನಗರದ ಜನಪ್ರತಿನಿಧಿಗಳು ಕೂಡಲೇ ಇದರ ಬಗ್ಗೆ ಪರಿಶೀಲನೆ ಮಾಡಿ ಸಾರ್ವಜನಿಕರಿಗೆ ಅನುಕೂಲ ವಾಗುವಂತೆ ಈ ಮಾರುಕಟ್ಟೆ ಬಳಿ ಇರುವ ಮೈದಾನವನ್ನು ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಿಕೊಡಬೇಕಾಗಿ ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ವತಿಯಿಂದ ಒತ್ತಾಯ.