Select Your Language

Notifications

webdunia
webdunia
webdunia
webdunia

ಕೋಟಿ ಕೋಟಿ ಬೆಲೆಯ ದುಬಾರಿ ಮೀನು:ಈ ಮೀನು ಹಿಡಿದರೆ ಜೈಲೇ ಗತಿ!

ಕೋಟಿ ಕೋಟಿ ಬೆಲೆಯ ದುಬಾರಿ ಮೀನು:ಈ ಮೀನು ಹಿಡಿದರೆ ಜೈಲೇ ಗತಿ!
ಲಂಡನ್ , ಬುಧವಾರ, 27 ಅಕ್ಟೋಬರ್ 2021 (17:48 IST)
ಲಂಡನ್ : ಫಿಶ್ ಮಾರುಕಟ್ಟೆಯಲ್ಲಿ ಜಗತ್ತಿನ ಅತ್ಯಂತ ದುಬಾರಿ ಮೀನು ಯಾವುದು ಅಂತಾ ನಿಮ್ಗೆ ಗೊತ್ತಾ? ಹಾಗಾದ್ರೆ ಅದ್ಯಾವುದು ಕೋಟಿ ಕೋಟಿ ಬೆಲೆಬಾಳುವ ದುಬಾರಿ ಮೀನು ಅಂತೀರಾ?
ಹಾಗಾದ್ರೆ ನಾವೇ ಹೇಳೋಕೆ ಹೊರಟಿರುವ ವಿನಾಶದ ಅಂಚಿನಲ್ಲಿರುವ ದುಬಾರಿ ಮೀನು ಯಾವುದೆಂದರೆ "ಅಟ್ಲಾಂಟಿಕ್ ಬ್ಲೂಫಿನ್ ಟ್ಯುನ" ಮೀನುಗಳು. ಅಕ್ಟೋಬರ್ 23ರಂದು ಯುಕೆಯ ಕೋಸ್ಟ್ ಆಫ್ ಕಾರ್ನವಾಲ್ ನಲ್ಲಿ ಬ್ಲೂಫಿನ್ ಟ್ಯೂನ್ ಮೀನುಗಳ ಹಿಂಡು ಪ್ರತ್ಯಕ್ಷವಾಗಿತ್ತು. ಈ ಸುದ್ದಿ ಕಾಡ್ಗಿಚ್ಚಿನಂತೆ ನಗರದಾದ್ಯಂತ ಹಬ್ಬಿತು. ಹಲವು ವರ್ಷಗಳಿಂದ ಕಂಡಿರದ ಮೀನುಗಳು ಪ್ರತ್ಯಕ್ಷವಾಗಿದ್ದಕ್ಕೆ ಅಲ್ಲಿಯ ಜನ ನೋಡಲು ಕಡಲಂಚಿನಲ್ಲಿ ಜಮಾಯಿಸಿದ್ದರು.
ಮೀನು ದುಬಾರಿಯಾಗಲು ಏನು ಕಾರಣ?
ಯುರೋಪಿನಾದ್ಯಂತ ಅಟ್ಲಾಂಟಿಕ್ ಬ್ಲೂಫಿನ್ ಟ್ಯೂನ್ ಮೀನಿನ ಬೆಲೆ ಲಕ್ಷಾಂತರ ಫೌಂಡ್ ಗಳಲ್ಲಿದೆ. ಆದರೆ, ಈ ಮೀನಿಗೆ ಗಾಳ ಹಾಕುವುದು, ಮಾರಾಟ ಮಾಡುವುದು ಅಷ್ಟು ಸುಲಭದ ಮಾತಲ್ಲ. ಏಕೆಂದ್ರೆ, ಈ ಮೀನನ್ನು ಹಿಡಿಯುವುದು ಹಾಗೂ ಮಾರಾಟ ಮಾಡುವುದು ಬ್ರಿಟನ್ ನಲ್ಲಿ ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. ಬ್ರಿಟಿಷ್ ಕರೆನ್ಸಿಯನ್ನು ಭಾರತದ ರೂಪಾಯಿಗೆ ಪರಿವರ್ತಿಸಿದರೆ ಈ ಮೀನಿನ ಬೆಲೆ 23 ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.
ಬ್ಲೂಫಿನ್ ಟ್ಯೂನ್ ಮೀನಿನ ವಿಶೇಷತೆ
ಈ ಮೀನಿಗೆ ಸಂಬಂಧಿಸಿದ ಅನೇಕ ವಿಚಾರಗಳು ಆಸಕ್ತಿದಾಯಕವಾಗಿವೆ. ಟ್ಯೂನ್ ಜಾತಿಯ ಮೀನಿನ ಗಾತ್ರ ತುಂಬಾನೆ ದೊಡ್ಡದಾಗಿರುತ್ತದೆ. ಇದು ಅಷ್ಟೇ ವೇಗವಾಗಿ ಸಹ ಈಜುತ್ತದೆ. ಟ್ಯೂನ್ ಮತ್ಸ್ಯಗಳು ಸಾಮಾನ್ಯವಾಗಿ ಮನುಷ್ಯರ ಮೇಲೆ ದಾಳಿ ಮಾಡಲ್ಲ.
ಅಟ್ಲಾಂಟಿಕ್ ಬ್ಲೂಫಿನ್ ಟ್ಯೂನ್ ಮೀನುಗಳು ಕಳೆದ ನೂರು ವರ್ಷಗಳಿಂದ ಯುಕೆಯ ಕೋಸ್ಟ್ ಆಫ್ ಕಾರ್ನವಾಲ್ ನಲ್ಲಿ ಕಾಣಿಸಿಕೊಂಡಿಲ್ಲ ಅಂತಾ ಹೇಳಲಾಗುತ್ತಿದೆ. ಸದ್ಯ ಯೂರೋಪಿನಲ್ಲಿ ಬೇಸಿಗೆ ಇರೋದ್ರಿಂದ ಕಡಲಂಚಿಗೆ ಈ ಮೀನುಗಳು ಬರಲು ಕಾರಣ ಎನ್ನಲಾಗುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

‘ಒನ್ ನೇಷನ್ ಒನ್ ಎಲೆಕ್ಷನ್ ಜಾರಿ ಅಗತ್ಯ’; ಸಿ.ಟಿ. ರವಿ