Publish Date: Thu, 21 Oct 2021 (09:59 IST)
Updated Date: Thu, 21 Oct 2021 (10:02 IST)
ತುಮಕೂರು : ಕೊಬ್ಬರಿ ಬೆಳೆಗಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಹರಾಜಿನಲ್ಲಿ ಕ್ವಿಂಟಾಲ್ ಕೊಬ್ಬರಿಗೆ ಗರಿಷ್ಠ 17,426 ರೂಪಾಯಿಗೆ ಮಾರಾಟವಾಗಿದೆ.
ಮಳೆಯಾದ ಪರಿಣಾಮ ಮಾರುಕಟ್ಟೆಗೆ ಕೊಬ್ಬರಿ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ಇದರಿಂದಾಗಿ ದರ ಹೆಚ್ಚಳವಾಗಿದೆ. ಮಾರುಕಟ್ಟೆಗೆ 2527 ಕ್ವಿಂಟಾಲ್ ಕೊಬ್ಬರಿ ಬಂದಿದೆ. ಕಳೆದ ಮೇ ತಿಂಗಳಲ್ಲಿ 18,000 ರೂ.ವರೆಗೆ ಕೊಬ್ಬರಿ ಮಾರಾಟವಾಗಿತ್ತು. ನಂತರ 15,000 ರೂ.ಗೆ ಇಳಿದಿತ್ತು. ಈಗ 17,426 ರೂಪಾಯಿಗೆ ಮಾರಾಟವಾಗಿದೆ.