Select Your Language

Notifications

webdunia
webdunia
webdunia
webdunia

ಜನಸಾಮಾನ್ಯನಿಗೆ ಮತ್ತೆ ಬೆಲೆ ಏರಿಕೆಗೆ ಬರೆ

ಜನಸಾಮಾನ್ಯನಿಗೆ ಮತ್ತೆ ಬೆಲೆ ಏರಿಕೆಗೆ ಬರೆ
ನವದೆಹಲಿ , ಶುಕ್ರವಾರ, 1 ಅಕ್ಟೋಬರ್ 2021 (14:14 IST)
ನವದೆಹಲಿ, ಅ.1 : ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಬೆಲೆ ಏರಿಕೆಯ ಬೆನ್ನಲ್ಲೇ ಭಾರತೀಯ ತೈಲ ಕಂಪೆನಿಗಳು ಗ್ಯಾಸ್ ಮತ್ತು ಪೆಟ್ರೋಲ್, ಡಿಸೇಲ್ ದರ ಏರಿಕೆ ಮಾಡಿ ಜನ ಸಾಮಾನ್ಯರಿಗೆ ಬರೆ ಎಳೆದಿವೆ.

ಇಂದು ವಾಣಿಜ್ಯ ಬಳಕೆಯ ಸಿಲಿಂಡರ್ ಮೇಲೆ 43 ರೂಪಾಯಿ ದರ ಏರಿಕೆ ಮಾಡಿದ್ದು ಜೊತೆಯಲ್ಲೇ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯೂ ಹೆಚ್ಚಳವಾಗಿದೆ.
ಹೋಟೆಲ್, ವಾಹನ ಸೇರಿದಂತೆ ಇತರೆಡೆಗಳಲ್ಲಿ ವಾಣಿಜ್ಯ ಬಳಕೆ ಮಾಡುವ 19 ಕೆ.ಜಿ. ತೂಕದ ಸಿಲಿಂಡರ್ ಬೆಲೆ 43.5 ರೂ.ಗೆ ಹೆಚ್ಚಳವಾಗಿದೆ. ಕಳೆದ ಸೆಪ್ಟಂಬರ್ 1ರಂದು 75 ರೂ. ಹೆಚ್ಚಿಸಲಾಗಿತ್ತು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿಲಿಂಡರ್ ಬೆಲೆ 1693ರಿಂದ 1736.5 ರೂ.ಗೆ ಹೆಚ್ಚಳವಾಗಿದೆ. ಪರಿಷ್ಕರಣೆಗೊಂಡ ಸಿಲಿಂಡರ್ ದರ ಇಂದಿನಿಂದಲೇ ಜಾರಿಯಾಗಲಿದೆ.
ಸಮಾಧಾನಕರ ಅಂಶವೆಂದರೆ ಜನಸಾಮಾನ್ಯರು ಬಳಕೆ ಮಾಡುವ ಅಡುಗೆ ಅನಿಲದ ದರ ಏರಿಕೆಯಾಗಿದೆ. ಆದಾಗ್ಯೂ ವಾಣಿಜ್ಯ ಬಳಕೆಯ ದರ ಏರಿಕೆಯಿಂದ ಸರಕು, ಸಾಗಾಣಿಕೆ ಹಾಗು ವಾಣಿಜ್ಯ ಸೇವೆಗಳ ಮೇಲೆ ಪರಿಣಾಮ ಬೀರಲಿದೆ.
ಜೊತೆಯಲ್ಲೇ ಪೆಟ್ರೋಲ್ ಬೆಲೆಯನ್ನು 25ರಿಂದ 26 ಪೈಸೆಗಳವರೆಗೂ ಏರಿಕೆ ಮಾಡಲಾಗಿದೆ. ಡಿಸೇಲ್ ದರ ಕೂಡ 32 ಪೈಸೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ 26 ಪೈಸೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 105.18 ರೂ.ನಷ್ಟಾಗಿದೆ. ಡಿಸೇಳ್ 98.06 ರೂ.ನಷ್ಟಾಗಿದೆ.
ಇತ್ತೀಚೆಗೆ ತಿಂಗಳಲ್ಲಿ ಎರಡು ಬಾರಿ ತಲಾ 12 ಪೈಸೆಯಂತೆ ದರ ಇಳಿಕೆ ಮಾಡಿ ಆಶಾವಾದ ಮೂಡಿಸಿದ್ದ ಕೇಂದ್ರ ಸರ್ಕಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆಯಾಗುತ್ತಿದ್ದಂತೆ ಕಡಿಮೆ ಮಾಡಿದ್ದ ಬೆಲೆಗಿಂತ ದುಪ್ಪಟ್ಟು ದರ ಹೆಚ್ಚಳ ಮಾಡಿವೆ.
ಈ ಮೊದಲು ಅಂತರಾಷ್ಟ್ರೀಯ ಮಾಡುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆ ಇದ್ದಾಗಲೂ ದರ ಕಡಿಮೆ ಮಾಡಿರಲಿಲ್ಲ. ಪ್ರತಿಪಕ್ಷಗಳು, ವಿವಿಧ ಸಂಘಟನೆಗಳು ಹಲವಾರು ಬಾರಿ ಪ್ರತಿಭಟನೆ ನಡೆಸಿ ಒತ್ತಾಯಿಸಿದಾಗ್ಯೂ ಕೇಂದ್ರ ಸರ್ಕಾರ ಮತ್ತು ತೈಲ ಕಂಪೆನಿಗಳು ಜಗ್ಗಿರಲಿಲ್ಲ. ತೈಲ ಬೆಲೆ ಏರಿಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುತ್ತಿರುವ ದುಬಾರಿ ಸುಂಕವೂ ಕಾರಣ ಎಂಬ ಆರೋಪಗಳಿವೆ.
ಅಕ್ಟೋಬರ್ 1ರಂದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಮೂರು ವರ್ಷದಲ್ಲೇ ಅತ್ಯಧಿಕ ಎನ್ನುವಷ್ಟು ಕಚ್ಚಾ ತೈಲದ ದರ ಏರಿಕೆಯಾಗಿದೆ. ಪ್ರತಿ ಬ್ಯಾರೆಲ್ಗೆ 78.64 ಡಾಲರ್ಗಳಷ್ಟಾಗಿದೆ. ಇದರಿಂದ ತೈಲ ಬೆಲೆ ಪರಿಷ್ಕರಣೆ ಅನಿವಾರ್ಯ ಎಂದು ತೈಲ ಕಂಪೆನಿಗಳು ಸಮರ್ಥಿಸಿಕೊಂಡಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗ್ಗೆಯಿಂದ ಸಂಜೆಯವರೆಗೂ ಶಾಲೆ ನಡೆಸಲು ಸೂಚನೆ: ಬಿ.ಸಿ. ನಾಗೇಶ್