Select Your Language

Notifications

webdunia
webdunia
webdunia
webdunia

ಅಡಿಕೆ ಬೆಳೆಗಾರರಿಗೆ ಬಂಪರ್, 60 ಸಾವಿರ ರೂ. ದಾಟಿದ ದರ

ಮಾರುಕಟ್ಟೆ
ಶಿವಮೊಗ್ಗ: ಅಡಿಕೆ ದರ 60 ಸಾವಿರ ರೂಪಾಯಿ ದಾಟಿದೆ. ಕಳೆದ 10 ದಿನದ ಅವಧಿಯಲ್ಲಿ 10 ಸಾವಿರ ರೂಪಾಯಿಯಷ್ಟು ಜಾಸ್ತಿಯಾಗಿದೆ.

ಸೋಮವಾರ ಮಾರುಕಟ್ಟೆಯಲ್ಲಿ ರಾಶಿ ಇಡಿ ಅಡಿಕೆ 60,000 ರೂಪಾಯಿ ದಾಟಿದೆ. ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಇಡಿ ದರ ಕನಿಷ್ಠ 55,099 ರೂ.ನಿಂದ ಗರಿಷ್ಠ 60,509 ರೂ.ವರೆಗೆ ಮಾರಾಟವಾಗಿದೆ. ಬೆಟ್ಟೆ ದರ 39,305 ರೂ.ವರೆಗೂ ಮಾರಾಟವಾಗಿದೆ.
ಕಳೆದ ವರ್ಷ ಅಡಿಕೆ ದರ 42 ಸಾವಿರ ರೂ.ವರೆಗೂ ಇತ್ತು. ವಿದೇಶಿ ಅಡಿಕೆ ಮೇಲೆ ನಿರ್ಬಂಧ ಹೇರಲಾಗಿದೆ. ಅಲ್ಲದೇ ಈ ಬಾರಿ ಅಡಿಕೆ ಫಸಲು ಕಡಿಮೆಯಾಗಿದೆ. ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಅಡಿಕೆ ಬರುತ್ತಿರುವುದರಿಂದ ಬೆಲೆ ಏರಿದೆ. ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಮಾರುಕಟ್ಟೆಗೆ ಬಂದರೆ, ದರ ಇಳಿಯಬಹುದು ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗಣೇಶೋತ್ಸವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿ : ಸುಧಾಕರ್ ಸೂಚನೆ