ಪಾಕ್ ನ ನೀಚ ಕಾರ್ಯವನ್ನು ಬಯಲು ಮಾಡಿದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್

ಶುಕ್ರವಾರ, 15 ನವೆಂಬರ್ 2019 (09:35 IST)
ಪಾಕಿಸ್ತಾನ : ಭಾರತೀಯ ಸೇನೆಯ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಪಾಕ್ ನ ಮಾಜಿ ಅಧ್ಯಕ್ಷ ಪರ್ವೇಜ್  ಮುಷರಫ್ ಹೇಳುವುದರ ಮೂಲಕ ಪಾಕ್ ನ ನೀಚ ಕಾರ್ಯವನ್ನು ಬಯಲು ಮಾಡಿದ್ದಾರೆ.
2015ರ ಸಂದರ್ಶನವೊಂದರಲ್ಲಿ ಪಾಕ್ ನ ಮಾಜಿ ಅಧ್ಯಕ್ಷ ಪರ್ವೇಜ್  ಮುಷರಫ್ ಈ ವಿಚಾರ ಬಹಿರಂಗಪಡಿಸಿದ್ದು, ಈ ವಿಡಿಯೋವನ್ನು  ಇದೀಗ ಪಾಕಿಸ್ತಾನದ ರಾಜಕಾರಣಿ ಫರಾತುಲ್ಲಾ ಬಾಬರ್ ತಮ್ಮ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.


ಹಾಗೇ ಈ ವೇಳೆ ಪರ್ವೇಜ್  ಮುಷರಫ್ ಅವರು, ಜಿಹಾದಿ ಭಯೋತ್ಪಾದಕರು ಪಾಕಿಸ್ತಾನದ ಹೀರೋಗಳು. ಒಸಮಾ ಬಿನ್ ಲಾಡೆನ್, ಅಯ್ಮಾನ್ ಅಲ್ ಜವಾಹಿರಿ, ಜಲಾಲುದ್ದೀನ್ ಹಖ್ಖಾನಿ  ಮುಂತದವರು ಪಾಕಿಸ್ತಾನದ ಹೀರೋಗಳು ಎಂದು ವರ್ಣಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹಾಸ್ಟೆಲ್ ಶುಲ್ಕ ಹೆಚ್ಚಳ ವಿರೋಧಿಸಿ ಸ್ವಾಮಿ ವಿವೇಕಾನಂದ ಪ್ರತಿಮೆ ಭಗ್ನಗೊಳಿಸಿದ ಜೆಎನ್ ಯು ವಿದ್ಯಾರ್ಥಿಗಳು