Select Your Language

Notifications

webdunia
webdunia
webdunia
webdunia

ಮಾಜಿ ಸಚಿವ ಶಿವಾನಂದ ನಾಯ್ಕ್ ಮೇಲೆ ಲೈಂಗಿಕ ಕಿರುಕುಳ ಆರೋಪ

ಮಾಜಿ ಸಚಿವ ಶಿವಾನಂದ ನಾಯ್ಕ್ ಮೇಲೆ ಲೈಂಗಿಕ ಕಿರುಕುಳ ಆರೋಪ
ಉತ್ತರ ಕನ್ನಡ , ಶನಿವಾರ, 20 ಅಕ್ಟೋಬರ್ 2018 (15:03 IST)
ಮಾಜಿ ಸಚಿವ ಶಿವಾನಂದ ನಾಯ್ಕ್ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ.

ಈ ಕುರಿತು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಶಿವಾನಂದ ನಾಯ್ಕ್ ಹೇಳಿಕೆ ನೀಡಿದ್ದು, ತನ್ನ ಮೇಲೆ ಬಂದಿರುವ ಆರೋಪವನ್ನ ವಿರೋಧಿಸುತ್ತೇನೆ. ತನ್ನ ಮೇಲೆ ಬಂದಿರುವ  ‌ಆರೋಪವನ್ನ ಕಾನೂನು ಮೂಲಕ ಎದುರಿಸಲು ಸಿದ್ಧನಿದ್ದೇನೆ.

ರಾಜಕೀಯ ಕ್ಷೇತ್ರದಲ್ಲಿ ಇರುವಾತ ನಾನು. ಯಾರದೋ ಪಿತೂರಿಯಿಂದ ಮಹಿಳೆ ಆರೋಪ ಮಾಡಿರಬಹುದು.
ಆದರೆ ಮಹಿಳೆ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದರು.

ರಾಜಕೀಯ ಕ್ಷೇತ್ರದಲ್ಲಿರುವ ನಾನು ಎಂದಿಗೂ ಕೆಟ್ಟ ಭಾವನೆಯಲ್ಲಿ ನೋಡಿಲ್ಲ ಹಾಗೂ ನಡೆದು ಕೊಂಡಿಲ್ಲ ಎಂದು ಶಿವಾನಂದ ನಾಯ್ಕ ಹೇಳಿದ್ದಾರೆ. ಇವರು ಭಟ್ಕಳ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವರಾಗಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಇನ್ನಿಲ್ಲ