Publish Date: Fri, 19 Oct 2018 (22:52 IST)
Updated Date: Fri, 19 Oct 2018 (22:56 IST)
ಸಂಸದರ ನಿಧಿಗೆ ಕನ್ನ ಹಾಕಿದ ಭೂಪ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ವಿಜಯಪುರ ನಗರದ ಪ್ರತಿಷ್ಠಿತ ಬಂಜಾರಾ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಕೆ.ಜಿ.ರಾಠೋಡ್ ಪೊಲೀಸ್ ಅತಿಥಿಯಾಗಿರುವ ಭೂಪನಾಗಿದ್ದಾನೆ.
ಸಂಸದ ರಮೇಶ ಜಿಗಜಿಣಗಿ ಅವರ ಲೆಟರ್ ಪ್ಯಾಡ್ ಮೇಲೆ ಫೋರ್ಜರಿ ಸಹಿ ಮಾಡಿ ಹಣ ಲಪಟಾಯಿಸಿದ ಬಗ್ಗೆ ದೂರು ದಾಖಲಾಗಿತ್ತು.
ಈ ದೂರಿನ ಅನ್ವಯ ಕೆ.ಜಿ.ರಾಠೋಡ್ ಅವರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ವಿಚಾರಣೆನಡೆಸುತ್ತಿದ್ದಾರೆ.
ವಿಷಯ ತಿಳಿದು ಸ್ವತಃ ರಮೇಶ ಜಿಗಜಿಣಗಿಯವರೇ ಬೆಚ್ಚಿಬಿದ್ದಿದ್ದಾರೆ. ರಾಠೋಡ್ ಅವರು ಜಿಗಜಿಣಗಿ ಅವರ ಲೆಟರ್ ಹೆಡ್ ನಲ್ಲಿ ಫೋರ್ಜರಿ ಸಹಿ ಮಾಡಿ ಎರಡು ವರ್ಷಗಳಿಂದ ಆರು ಕಾಮಗಾರಿಗಳನ್ನು ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಯ ಕೈವಾಡವೂ ಇರುವ ಶಂಕೆ ವ್ಯಕ್ತವಾಗಿದೆ.
Jagadeesh
Publish Date: Fri, 19 Oct 2018 (22:52 IST)
Updated Date: Fri, 19 Oct 2018 (22:56 IST)