Publish Date: Sun, 16 Jun 2019 (18:59 IST)
Updated Date: Sun, 16 Jun 2019 (19:01 IST)
ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ರಮೇಶ್ ಜಾರಕಿಹೊಳಿ ಅವರಿಗೆ ಮತ್ತೆ ಸೋಲಾಗಿದೆ ಎಂಬ ಚರ್ಚೆ ಶುರುವಾಗಿದೆ.
ರಮೇಶ ಜಾರಕಿಹೊಳಿ ಆಪ್ತ ಶಾಸಕ ಮಹೇಶ ಕುಮಟೊಳ್ಳಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ನಾನಾಂತೂ ಯಾವುದೇ ಮಂತ್ರಿ ಸ್ಥಾನಬೇಡ ಅಂತಾ ಹೇಳಿದಿನಿ. ಆದ್ರೆ ರಮೇಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಹೇಳಿರುವೆ. ಕಾಂಗ್ರೆಸ್ ಪಕ್ಷದ ಶಾಸಕರನ್ನ ಏನು ಕಡೆಗಣಿಸಿಲ್ಲಾ. ಸಾಂದರ್ಭಿಕವಾಗಿ ಟೈಮ್ ಬಂದಾಗ್ ಮಾಡ್ತಾರೆ ಎಂದರು.
ರಮೇಶ ಜಾರಕಿಹೊಳಿ ಬೆಂಗಳೂರಿನಲ್ಲಿ ಇದ್ದಾರೆ. ಭೇಟಿ ಆಗಿರುವೆ ಎಂದರು. ರಮೇಶ್ ಜಾರಕಿಹೊಳಿಗೆ ಸೋಲಾಯಿತಾ? ಎಂಬ ಪ್ರಶ್ನೆಗೆ ಸೋಲು ಗೆಲುವು ಇರುವುದಿಲ್ಲ. ಎಲ್ಲವೂ ಫಾರ್ಟ್ ಆಫ್ ದಿ ಲೈಫ್ ಎಂದರು ಶಾಸಕ ಕುಮಟೊಳ್ಳಿ.