ಮಹಿಳಾ ಅಧಿಕಾರಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದ್ಯಾಕೆ

ಭಾನುವಾರ, 16 ಜೂನ್ 2019 (18:31 IST)
ಮೆಚ್ಚಿನ ಅಧಿಕಾರಿಯನ್ನು ತೆರೆದ ವಾಹನದಲ್ಲಿ ಜನರು ಮೆರವಣಿಗೆ ಮಾಡಿದ್ದಾರೆ.

ಬೆಳಗಾವಿ ದಂಡು ಮಂಡಳಿಯಲ್ಲಿ ಅಪರೂಪದ ಘಟನೆ ನಡೆದಿದೆ. ದಂಡು ಮಂಡಳಿ ಸಿಇಓ ದಿವ್ಯ ಶಿವರಾಂಗೆ ಅದ್ದೂರಿ ಬಿಳ್ಕೋಡುಗೆ ನೀಡಲಾಗಿದೆ. ಬೆಳಗಾವಿ ದಂಡು ಮಂಡಳಿಯಿಂದ ದೆಹಲಿಯ ಪ್ರಧಾನಿ ಕಚೇರಿಗೆ ವರ್ಗವಾಗಿದೆ. ಕಚೇರಿಯಿಂದ ನಿವಾಸದ ವರೆಗೆ ತೆರೆದ ಜೀಪಿನಲ್ಲಿ ಮರೆವಣಿಗೆ ಮಾಡಲಾಯಿತು.

ಜೀಪ್ ನ್ನು ತೇರಿನಂತೆ ಎಳೆದು‌ ನೆಚ್ಚಿನ ಅಧಿಕಾರಿಯ ಮೆರವಣಿಗೆಯನ್ನು ಮಾಡಿದ್ರು ಜನರು. ಜನರ ಪ್ರೀತಿ ಕಂಡು ಭಾವುಕರಾದರು ದಿವ್ಯಾ ಶಿವರಾಂ.

ಕಳೆದ 3 ವರ್ಷಗಳಿಂದ ದಂಡು ಮಂಡಳಿ ಸಿಇಓ‌ ಆಗಿದ್ದರು ದಿವ್ಯಾ ಶಿವರಾಂ. ತಮ್ಮ ಅವಧಿಯಲ್ಲಿ ಅನೇಕ ಜನಪರ ಕೆಲಸ ಮಾಡಿದ್ದಾರೆ. ಜನರ ಪ್ರೀತಿ ಕಂಡು ಭಾವುಕರಾದರು ಸಿಇಓ ದಿವ್ಯಾ ಶಿವರಾಂ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸ್ಟೈಲೋಗೆ ತಗುಲಿದ ಬೆಂಕಿ; ಲಕ್ಷಾಂತರ ರೂ. ನಷ್ಟ