Select Your Language

Notifications

webdunia
webdunia
webdunia
webdunia

ತೋಟಗಾರಿಕೆ ವಿವಿ ಸಿಬ್ಬಂದಿ ವರ್ಗಾವಣೆ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ ಸಚಿವರು

ಬಾಗಲಕೋಟೆ
ಬಾಗಲಕೋಟೆ , ಶನಿವಾರ, 8 ಜೂನ್ 2019 (11:27 IST)
ಬಾಗಲಕೋಟೆ :  ತೋಟಗಾರಿಕೆ ವಿಶ್ವವಿದ್ಯಾಲಯ ಸಿಬ್ಬಂದಿಯ ವರ್ಗಾವಣೆ ವಿಚಾರದಲ್ಲಿ ತೋಟಗಾರಿಕೆ ಸಚಿವರಾದ ಎಂ.ಸಿ.ಮನಗೂಳಿ ಹಸ್ತಕ್ಷೇಪ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.



ಬಾಗಲಕೋಟೆ ತೋಟಗಾರಿಕೆ ವಿವಿಯ ಸಿಬ್ಬಂದಿ ವರ್ಗಾವಣೆ ವಿಚಾರದಲ್ಲಿ ಮೂಗು ತುರಿಸಿದ ತೋಟಗಾರಿಕೆ ಖಾತೆ ಸಚಿವ ಎಂ.ಸಿ.ಮನಗೂಳಿ  ನನ್ನ ಗಮನಕ್ಕೆ ತರದೆ ವರ್ಗಾವಣೆ ಮಾಡಬಾರದೆಂದು ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

 

ಇಲಾಖೆಯ ಕಾರ್ಯದರ್ಶಿ ಸಚಿವರ ಪತ್ರದ ಪ್ರತಿಯನ್ನು ವಿವಿ ಪ್ರಭಾರಿ ಉಪಕುಲಪತಿಗಳಿಗೆ ರವಾನೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ವರ್ಗಾವಣೆ ಆದೇಶಕ್ಕೆ ತಡೆಗೆ ಆಡಳಿತ ಮಂಡಳಿ ಸೂಚನೆ ನೀಡಿದ್ದರಿಂದ ವಿವಿ ಆಡಳಿತ ಮಂಡಳಿ ವರ್ಗಾವಣೆಯನ್ನು ತಡೆಹಿಡಿದಿದ್ದಾರೆ.

 

ಅಲ್ಲದೇ ಸಚಿವರು ವಿವಿ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ.ತೋಟಗಾರಿಕೆ ವಿವಿ ನಿಯಮಾವಳಿ ಪ್ರಕಾರ ಹಸ್ತಕ್ಷೇಪವಿಲ್ಲ. ಆದರೆ ಸಚಿವರಿಂದ ನಿಯಮ ಉಲ್ಲಂಘನೆಯಾಗಿದೆ ಎಂದು ವಿವಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಆರೋಪ ಮಾಡಿದೆ. ಹಾಗೇ ಸಚಿವರು ಈ ಕಾರ್ಯದಿಂದ ಹಿಂದೆ ಸರಿಯುವಂತೆ ಆಗ್ರಹಿಸಿದ್ದು, ಇಲ್ಲವಾದರೆ ಸಚಿವರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ  ಎಚ್ಚರಿಕೆ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
 


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಆಂಧ್ರದಲ್ಲಿ ಡಿಸಿಎಂ ಆಗಿ ಐವರು ಶಾಸಕರಿಂದ ಪ್ರಮಾಣವಚನ ಸ್ವೀಕಾರ