Publish Date: Sun, 08 Sep 2019 (19:52 IST)
Updated Date: Sun, 08 Sep 2019 (19:54 IST)
ಮಾಜಿ ರಾಜ್ಯಪಾಲ ಹಂಸರಾಜ್ ಅಲ್ಲ, ಅವರು ಧ್ವಂಸರಾಜ್. ಅಂದಿನ ಲೋಕಾಯುಕ್ತ ಸಂತೋಷ ಹೆಗಡೆ ಕೊಟ್ಟ ವರದಿಗೆ ಪ್ರಾಸಿಕ್ಯುಷನ್ ಗೆ ಅನುಮತಿ ಕೊಟ್ಟರು. ಸಂತೋಷ ಹೆಗಡೆ ವಿಕೃತ ಮನಸ್ಸಿನ ವ್ಯಕ್ತಿ,
ಹೀಗಂತ ಎಂ.ಪಿ.ರೇಣುಕಾಚಾರ್ಯ ಟೀಕೆ ಮಾಡಿದ್ದಾರೆ.
ರಾಜಕಾರಣಿಗಳ ಹೇಳಿಕೆಗಳು ಸ್ವಲ್ಪ ವ್ಯತ್ಯಾಸವಾಗಿರಬಹುದು ಅದನ್ನ ವೈಭವೀಕರಿಸಭಾರದು. ಕೆ.ಎಸ್.ಈಶ್ವರಪ್ಪನವರು ಹಿರಿಯರು ಉದ್ಧಟತನದ ಹೇಳಿಕೆ ನೀಡುವವರಲ್ಲ. ಮಾಧ್ಯಮದವರು ಎಡವಿದ ವ್ಯಕ್ತಿಗಳನ್ನು ಮೇಲಕ್ಕೆ ಎತ್ತಿ ಅವರ ಮನಸ್ಸನ್ನ ಪರಿವರ್ತನೆ ಮಾಡಬೇಕು.
ನಾನು ಅನರ್ಹರು ಬಿಜೆಪಿ ಸೇರಿದ್ದಾರೆಂದು ಹೇಳಿಲ್ಲ. ಆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ ಅಂತ
ಮಾಧ್ಯಮದವರಿಗೆ ನೀತಿ ಪಾಠ ಮಾಡಿದ್ದಾರೆ ಎಂ.ಪಿ ರೇಣುಕಾಚಾರ್ಯ.
ಕಾಂಗ್ರೆಸ್ ನವರು ಬಿ.ಎಸ್. ಯಡಿಯೂರಪ್ಪ ಜೈಲಿಗೆ ಹೋದವರು ಎಂದು ಪದೇ ಪದೇ ಹೇಳುತ್ತಿದ್ದರು.
ಸಂತೋಷ ಹೆಗಡೆ ವಿಕೃತ ಮನಸ್ಸಿನ ವ್ಯಕ್ತಿ. ಯಡಿಯೂರಪ್ಪ ನವರ ಮೇಲೆ ದುರುದ್ದೇಶದಿಂದ ಕೇಸ್ ಹಾಕಿ ಜೈಲಿಗೆ ಹೋಗುವಂತೆ ಮಾಡಿದ್ರು ಅಂತ ರೇಣುಕಾಚಾರ್ಯ ಟೀಕೆ ಮಾಡಿದ್ದಾರೆ.