Select Your Language

Notifications

webdunia
webdunia
webdunia
webdunia

ಘಟಪ್ರಭೆ ಭೋರ್ಗರೆತಕ್ಕೆ ಜನಜೀವನ ತತ್ತರ

ಘಟಪ್ರಭೆ ಭೋರ್ಗರೆತಕ್ಕೆ ಜನಜೀವನ ತತ್ತರ
ಬೆಳಗಾವಿ , ಶನಿವಾರ, 7 ಸೆಪ್ಟಂಬರ್ 2019 (18:45 IST)
ಮಹಾರಾಷ್ಟ್ರದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗಡಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಮತ್ತೆ ಮುಂದುವರಿದಿದೆ.

ಬೆಳಗಾವಿ ಜಿಲ್ಲೆಯಾದ್ಯಾಂತ ಪ್ರವಾಹದ ಭೀತಿ ಎದುರಾಗಿದೆ. ಘಟಪ್ರಭೆ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು  ಗೋಕಾಕ ಜಲಪಾತವು ರಭಸದಿಂದ ಧುಮ್ಮಿಕ್ಕುತ್ತಿದೆ.

ಕಳೆದ ಎರಡು ದಿನಗಳಿಂದ ಬೆಳಗಾವಿ ಜಿಲ್ಲೆ ಮತ್ತು ಮಹರಾಷ್ಟ್ರ ರಾಜ್ಯದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರ ಪರಿಣಾಮದಿಂದ ಜಿಲ್ಲೆಯ ಎಲ್ಲ ನದಿಗಳು ತುಂಬಿವೆ. ಮತ್ತೆ ಪ್ರವಾಹದ ಭೀತಿಯಲ್ಲಿದ್ದು ನದಿ ತಟದ ಗ್ರಾಮದ ಜನರು ಕೈಯಲ್ಲಿ ಜೀವ ಹಿಡಿದುಕೊಂಡು ಕುಳಿತುಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಹಿಡಕಲ್ ಜಲಾಶಯದಿಂದ ಘಟಪ್ರಬಾ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಘಟಪ್ರಭ ನದಿ ಪ್ರವಾಹ ಮಟ್ಟ ಮೀರಿ ಹರಿಯುತ್ತಿದೆ. ನೀರಿನ ಮಟ್ಟ ಹೆಚ್ಚಿರುವುದರಿಂದ ಗೋಕಾಕ ಜಲಪಾತ ರಭಸದಿಂದ ಧುಮ್ಮಕ್ಕುತ್ತಿದ್ದು ಪ್ರವಾಸಿಗರಿಗೆ  ಮನರಂಜನೆಯ ರಸದೌತನ ನೀಡುತ್ತಿದೆ. ಆದರೆ ಮತ್ತೊಂದೆಡೆ ಈಗಾಗಲೇ ಪ್ರವಾಹದ ಭೀತಿ ಎದುರಿಸಿ ಸುಧಾರಿಸಿಕೊಳ್ಳುತ್ತಿದ್ದ ಗೋಕಾಕ ತಾಲೂಕಿನ ಜನತೆಗೆ ಮತ್ತೆ ಭಯದ ವಾತಾವರಣ ಸೃಷ್ಟಿ ಮಾಡಿದೆ.  

 


Share this Story:

Follow Webdunia kannada

ಮುಂದಿನ ಸುದ್ದಿ

ನೈಸ್ ರಸ್ತೆಯಲ್ಲಿ ಕಾಂಗ್ರೆಸ್ ನವರು ಮಾಡಿದ್ರು ಈ ಕೆಲಸ