Webdunia - Bharat's app for daily news and videos

Install App

ಚಾಮರಾಜನಗರದಲ್ಲಿ ಕಾಡಾನೆ ಸೆರೆ

Webdunia
ಬುಧವಾರ, 11 ಜನವರಿ 2023 (17:53 IST)
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ G.S ಬೆಟ್ಟ ವಲಯದ ಸುತ್ತಮುತ್ತ ರೈತರಿಗೆ ತಲೆನೋವಾಗಿದ್ದ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ. ಸಾಕಾನೆಗಳಾದ ಅಭಿಮನ್ಯು, ಮಹೇಂದ್ರ, ಗಣೇಶ, ಭೀಮ ಸಹಾಯದಿಂದ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಯಿತು. ಕಡೈಕೋಟೆ ಎಂಬಲ್ಲಿ ಸೆರೆ ಹಿಡಿಯಲಾಗಿದೆ.  ಬೆಳೆ ಹಾನಿ ಮಾಡುತ್ತಿದ್ದ ಕಾಡಾನೆಯನ್ನ ಸೆರೆ ಹಿಡಿಯುವಂತೆ ಅನೇಕ ಬಾರಿ ಒತ್ತಾಯ ಮಾಡಲಾಗಿತ್ತು. ಇದೀಗ ಆನೆಯನ್ನ ಸೆರೆ ಹಿಡಿದು, ಐನೋರ್ ಮಾರಿಗುಡಿ ಸಾಕಾನೆಗಳ ಶಿಬಿರಕ್ಕೆ ರವಾನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಕಾಡಾನೆಗಳಿಂದ ಅನೇಕ ರೈತರು ಜೀವ ಕಳೆದುಕೊಂಡಿದ್ದರು. ಇತ್ತೀಚೆಗಷ್ಟೇ ಹೊಲದಲ್ಲಿರುವ ಸಮಯದಲ್ಲಿ ಅಂಧ ವ್ಯಕ್ತಿಯ ಮೇಲೆ ಕಾಡಾನೆಗಳು ದಾಳಿ ಮಾಡಿತ್ತು. ನಂತರ ಗುಂಡ್ಲುಪೇಟೆ ತಾಲೂಕಿನ ಬೆಟ್ಟ ಮಾದಹಳ್ಳಿ ಗ್ರಾಮದ ರೈತನ ಮೇಲೆ ಏಕಾಏಕಿ ಆನೆಗಳು ದಾಳಿ ಮಾಡಿ, ಬೈಕ್​ನ್ನು ಜಖಂಗೊಳಿಸಿದ್ದವು. ಇದೀಗ ಆನೆಯನ್ನ ಸೆರೆ ಹಿಡಿದಿದ್ದು, ರೈತರು ನಿಟ್ಟುಸಿರು ಬೀಡುವಂತಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜೈಲಿನಲ್ಲಿ ಮೊಬೈಲ್ ಬಳಕೆ, ಪ್ರಜ್ವಲ್ ರೇವಣ್ಣ ಎರಡು ದಿನ ಪೊಲೀಸ್ ಕಸ್ಟಡಿಗೆ

ಅಯೋಧ್ಯೆ ಜನ್ಮಭೂಮಿ ತೀರ್ಥ ಕ್ಷೇತ್ರದಲ್ಲಿ ಮಿಲಿಟರಿ ಮಾದರಿ ಆಡಳಿತ: ಮಾಸ್ಟರ್‌ ಸ್ಟ್ರೋಕ್‌ ಕೊಟ್ಟ ಜಿತೇಂದ್ರ ಮಿಶ್ರಾ

ವಿಧಾನಸೌಧದಲ್ಲೇ ಕುಸಿದು ಬಿದ್ದ ಸಿಬ್ಬಂದಿ: ಸ್ವತಃ ಸಚಿವರೇ ಸಿಪಿಆರ್ ಮಾಡಿದ್ರು, ಆದ್ರೂ ಬದುಕುಳಿಯಲಿಲ್ಲ Video

ಅಪಘಾತದಲ್ಲಿ ಗಾಯಗೊಂಡಿದ್ದ ಚಿರತೆ ರಕ್ಷಿಸಲು ಹೋದಾಗ ಎಂತಹ ಅವಘಡ ನಡೆಯಿತು ನೋಡಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments