Publish Date: Wed, 11 Jan 2023 (15:59 IST)
Updated Date: Wed, 11 Jan 2023 (16:01 IST)
ನಿನ್ನೆ ಬೆಳಿಗ್ಗೆ 8 ರ ಸುಮಾರಿಗೆ ಲೇಡಿಸ್ ಟಾಯ್ಲೆಟ್ ಗೆ ಭೂಪ ನುಗ್ಗಿರುವ ಘಟನೆ ಜಯನಗರದ ವಿಜಯ ಕಾಲೇಜಿನಲ್ಲಿ ನಡೆದಿದೆ.ನಿನ್ನೆ ವಿದ್ಯಾರ್ಥಿನಿಯೊಬ್ಬರು ಶೌಚಾಲಯದ ಒಳಗೆ ಹೋಗಿದ್ದಾರೆ.ಆಗ ಅದೇ ಶೌಚಾಲಯದ ಒಳಗಡೆ ಯುವಕ ಒಬ್ಬ ಹೋಗಿದ್ದಾನೆ.ನಂತರ ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ.ನಂತರ ವಿದ್ಯಾರ್ಥಿನಿ ಕಿರುಚಲು ಶುರು ಮಾಡಿದ್ದಾಳೆ.ಆಗ ಆತ ಗಾಬರಿಯಿಂದ ಟಾಯ್ಲೆಟ್ ನ ಬಾಗಿಲು ಹಾಕಿಕೊಂಡು ಆ ಯುವತಿಯನ್ನು ಟಾಯ್ಲೆಟ್ ರೂಂನಲ್ಲಿ ಲಾಕ್ ಮಾಡಿ ಓಡಿ ಹೋಗಿದ್ದ.ಈ ಘಟನೆ ವಿರೋಧಿಸಿ ಇಂದು ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.
ಹೊರಗಡೆಯಿಂದ ಯಾರೋ ಬಂದಿದ್ದಾರೆ ಎಂದು ಆರೋಪಿಸಿ ಕಾಲೇಜಿನ ಮುಂಭಾಗದಲ್ಲಿ ಪ್ರತಿಭಟನೆ ಮಾಡ್ತಿದ್ದು,ಕಾಲೇಜಿನ ಆಡಳಿತ ಮಂಡಳಿಯಿಂದ ಜಯನಗರ ಪೊಲೀಸರಿಗೆ ದೂರು ನೀಡಲಾಗಿದೆ. ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡ್ತಿದ್ದಾರೆ.