Publish Date: Thu, 22 Apr 2021 (06:49 IST)
Updated Date: Thu, 22 Apr 2021 (06:50 IST)
ಮುಂಬೈ : ಕೊರೊನಾ ಸೋಂಕಿತನೊಬ್ಬ ಸಿಒವಿಐಡಿ ಆರೈಕೆ ಕೇಂದ್ರದಲ್ಲಿ ನರ್ಸ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಘಟನೆ ಮುಂಬೈ ನಲ್ಲಿ ನಡೆದಿದೆ.
ನರ್ಸ್ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂಬ ಕಾರಣಕ್ಕೆ ಕೊರೊನಾ ಸೋಂಕಿತ ನರ್ಸ್ ಮೇಲೆ ಚಾಕುವಿನಿಂದ ಹಲ್ಲೆಮಾಡಿದ್ದಾನೆ. ಘಟನೆಯಲ್ಲಿ ನರ್ಸ್ ಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಆರೋಪಿಯ ಮೇಲೆ ಪ್ರಕರಣ ದಾಖಲಾಗಿದೆ. ಆದರೆ ಆತ ಕ್ವಾರಂಟೈನ್ ನಲ್ಲಿರುವ ಕಾರಣ ಬಂಧಿಸಲಾಗಿಲ್ಲ ಎನ್ನಲಾಗಿದೆ.