Select Your Language

Notifications

webdunia
webdunia
webdunia
webdunia

ಆ ಕಾರಣಕ್ಕೆ ಪತಿಯನ್ನೇ ಕಿಡ್ನಾಪ್ ಮಾಡಿ ಕೊಲೆ ಮಾಡಿದ ಪತ್ನಿ

ಆ ಕಾರಣಕ್ಕೆ ಪತಿಯನ್ನೇ ಕಿಡ್ನಾಪ್ ಮಾಡಿ ಕೊಲೆ ಮಾಡಿದ ಪತ್ನಿ
ಚಾಮರಾಜನಗರ , ಮಂಗಳವಾರ, 28 ಜನವರಿ 2020 (13:43 IST)

ಪತಿಯೇ ಪರದೈವ ಅನ್ನೋ ಕಾಲ ಮಾಯವಾಗಿದೆ ಅನ್ನೋದಕ್ಕೆ ಮತ್ತೊಂದು ನಿದರ್ಶನ ಸಿಕ್ಕಂತಾಗಿದೆ.
 


ಇಬ್ಬರು ಗಂಡರನ್ನು ಕಟ್ಟಿಕೊಂಡಿದ್ದ ಪತ್ನಿಯೊಬ್ಬಳು ಇಬ್ಬರ ಜೊತೆ ಲವ್ವಿ ಡವ್ವಿ ನಡೆಸಿದ್ದಾಳೆ. ಇದೀಗ ಆ ಕಾರಣಕ್ಕೆ ಎರಡನೇ ಪತಿಯನ್ನೇ ಕಿಡ್ನಾಪ್ ಮಾಡಿ ಚಿತ್ರಹಿಂಸೆ ನೀಡಿ, ಹಲ್ಲೆ ನಡೆಸಿ ಕೊಲೆ ಮಾಡಿದ್ದಾಳೆ.

ಚಾಮರಾಜನಗರ ಜಿಲ್ಲೆಯ ಮುಡಿಗುಂಡ ನಿವಾಸಿ ಸುಬ್ರಹ್ಮಣ್ಯ ಎಂಬಾತನನ್ನು ಆತನ ಪತ್ನಿ ರಶ್ಮಿ, ಸಹೋದರ ರಾಕೇಶ್, ಹಾಗೂ ಸಹೋದರನ ಸ್ನೇಹಿತರು ಸೇರಿ ಆಸ್ತಿ ಹಾಗೂ ಹಣಕ್ಕಾಗಿ ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ್ದಾರೆ.

ಗಂಭೀರವಾಗಿ ಹಲ್ಲೆ ನಡೆಸಿದ ಬಳಿಕ ಮನೆ ಹತ್ತಿರ ಎಸೆದು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಪೊಲೀಸರ ಮುಂದೆ ಘಟನೆ ಬಗ್ಗೆ ವಿವರಿಸಿರೋ ಸುಬ್ರಹ್ಮಣ್ಯ ಸಾವನ್ನಪ್ಪಿದ್ದಾನೆ.

ಪತಿಯನ್ನೇ ಕೊಲೆ ಮಾಡಿರೋ ರಶ್ಮಿಯನ್ನು ಪೊಲೀಸರು ಬಂಧನ ಮಾಡಿದ್ದು, ಪರಾರಿಯಾಗಿರೋ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

53 ವರ್ಷದವನಿಂದ 20 ವರ್ಷದ ಯುವತಿಯ ಗುಪ್ತಾಂಗಕ್ಕೆ ರಾಡ್ ಹಾಕಿ ಅತ್ಯಾಚಾರ