Select Your Language

Notifications

webdunia
webdunia
webdunia
webdunia

ಕಿಲ್ಲರ್ ಬಿಎಂಟಿಸಿ ಗೆ ಐದು ವರ್ಷದ ಬಾಲಕಿ‌ ಸಾವು

bmtc
bangalore , ಬುಧವಾರ, 16 ಆಗಸ್ಟ್ 2023 (17:43 IST)
ಕಿಲ್ಲರ್ ಬಿಎಂಟಿಸಿಗೆ 5 ವರ್ಷದ ಬಾಲಕಿ ಸಾವನ್ನಪ್ಪಿರೋ ಘಟನೆ ಉತ್ತರಹಳ್ಳಿ ಮುಖ್ಯರಸ್ತೆಯ ಪದ್ಮಾವತಿ ಸಿಲ್ಕ್ ಶೋ ರೂಂ ಬಳಿ ನಡೆಸಿದೆ‌. ಘಟನೆಯಲ್ಲಿ 5ವರ್ಷದ ಪೂರ್ವಿ ರಾವ್ ಸಾವನ್ನಪ್ಪಿದ್ದು, ಪೂರ್ವಿ ಬೆಂಗಳೂರು ಇಂಟರ್ ನ್ಯಾಶನಲ್ ಪಬ್ಲಿಲ್ ಸ್ಕೂಲ್ ನಲ್ಲಿ ಫ್ರೀ ಕೆ.ಜಿ. ಓದುತ್ತಿದ್ದಳು.ಪ್ರತಿನಿತ್ಯ ತಂದೆಯೇ ಮಗಳನ್ನ ಶಾಲೆಗೆ ಬಿಟ್ಟು ಕೆಲಸಕ್ಕೆ ಹೋಗ್ತಿದ್ರು. ಇಂದು ಸಹ ಅದೇ ರೀತಿ ಮಗಳನ್ನ ಶಾಲೆಗೆ ಬಿಡುವುದಕ್ಕೆ ಹೋಗಿದ್ರು .ಆ ವೇಳೆ ವೇಗವಾಗಿ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದದು ಪೂರ್ವಿ ಮೇಲೆ ಹರಿದು ಸಾವನ್ನಪ್ಪಿದ್ದಾಳೆ.ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗ್ಲೆ ಬಿಎಂಟಿಸಿ ಚಾಲಕನ್ನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ರು ತಿಳಿಸಿದ್ದಾರೆ.

ತನಿಖೆ ವೇಳೆ ಬಿಎಂಟಿಸಿ ಬಸ್ ಚಾಲಕನದ್ದೆ ತಪ್ಪು ಎಂಬುದು ತಿಳಿದು ಬಂದಿದೆ. ಪೂರ್ವಿ ಮತ್ತು ತಂದೆ ಪ್ರಸನ್ನ ತೆರಳುತಿದ್ದ ಬೈಕ್ ಗೆ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಹಿಂಬದಿಯಿಂದ ಡಿಕ್ಕಿ ಹೊಡೆದಾಗ  ಪೂರ್ವಿ ಮತ್ತು ಪ್ರಸನ್ನ ಕೆಳಹೆ ಬಿದ್ದಿದ್ದಾರೆ. ಈ ವೇಳೆ ಪೂರ್ವಿ ತಲೆ ಮೇಲೆ ಬಸ್ ಹರಿದಿದೆ. ಬಿಎಂಟಿಸಿ ಬಸ್  ಮತ್ತು ಚಾಲಕ ಬಸವರಾಜ ಪೂಜಾರಿ ಯನ್ನು ವಶಕ್ಕೆ ಪಡೆದು ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅವರದ್ದೆಲ್ಲಾ ಮುಗೀಲಿ, ಇನ್ನೂ ಟೈಮಿದೆ-ಮಾಜಿ ಸಿಎಂ H.D.ಕುಮಾರಸ್ವಾಮಿ