Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಮೇಯರ್‌ ಚುನಾವಣಾ ಮತದಾರರ ಪಟ್ಟಿಯಿಂದ ಐವರು ಅನರ್ಹ ಶಾಸಕರು ಔಟ್

ಬಿಬಿಎಂಪಿ ಮೇಯರ್‌ ಚುನಾವಣಾ ಮತದಾರರ ಪಟ್ಟಿಯಿಂದ ಐವರು ಅನರ್ಹ ಶಾಸಕರು ಔಟ್
ಬೆಂಗಳೂರು , ಗುರುವಾರ, 29 ಆಗಸ್ಟ್ 2019 (11:21 IST)
ಬೆಂಗಳೂರು : ಮುಂದಿನ ತಿಂಗಳು ನಡೆಯಲಿರುವ ಬಿಬಿಎಂಪಿ ಮೇಯರ್‌ ಸ್ಥಾನದ ಚುನಾವಣೆ ವೇಳೆ ಐವರು ಅನರ್ಹ ಶಾಸಕರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದ್ದು ಈ ಮೂಲಕ ಅನರ್ಹ ಶಾಸಕರಿಗೆ ಮತ್ತೊಂದು ಶಾಕ್ ಎದುರಾದಂತಾಗಿದೆ.




ಈಗಾಗಲೇ ಅನರ್ಹಗೊಂಡು ಸುಪ್ರೀಂಕೋರ್ಟ್ ತೀರ್ಪಿಗಾಗಿ ಕಾದು ಕುಳಿತಿರುವ ಅನರ್ಹ ಶಾಸಕರಾದ ಭೈರತಿ ಬಸವರಾಜ್‌‌, ಮುನಿರತ್ನ, ಎಸ್‌.ಟಿ ಸೋಮಶೇಖರ್‌, ಗೋಪಾಲಯ್ಯ, ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದಲ್ಲದೇ ಹೊಸದಾಗಿ ಆಯ್ಕೆಯಾಗಿರುವ ಬೆಂಗಳೂರು ನಗರ ಸಂಸದರ ಹೆಸರನ್ನು ಸೇರಿಸಲಾಗಿದೆ.


ಮೇಯರ್ ಆಯ್ಕೆಗೆ ಸೆಪ್ಟಂಬರ್ ನಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಾದೇಶಿಕ ಚುನಾವಣಾ ಆಯುಕ್ತರಿಗೆ ಮತದಾರರ ಪಟ್ಟಿಯನ್ನು ಕಳುಹಿಸಿದ್ದು, ಅದರಲ್ಲಿ ಐವರು ಅನರ್ಹ ಶಾಸಕರನ್ನು ಹೊರಗಿಡಲಾಗಿದೆ ಎಂದು ಹೇಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಪ್ರಧಾನ ಕಾರ್ಯದರ್ಶಿಗಳ ಹುದ್ದೆಗೆ ಹೊಸಬರ ನೇಮಕಾತಿ ಸಾಧ್ಯತೆ