Select Your Language

Notifications

webdunia
webdunia
webdunia
webdunia

ಭೀಕರ ರಸ್ತೆ ಅಪಘಾತ: ಹಬ್ಬಕ್ಕೆ ಹೊರಟಿದ್ದ ಮೂವರು ಸೇರಿ ಐವರು ಸಾವು

Five dead
ಬೆಂಗಳೂರು , ಗುರುವಾರ, 19 ಅಕ್ಟೋಬರ್ 2017 (20:45 IST)
ಬೆಂಗಳೂರು: ದೀಪಾವಳಿ ಹಬ್ಬದ ಆಚರಣೆಗೆ ಊರಿಗೆ ತೆರಳುತ್ತಿದ್ದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸೇರಿದಂತೆ ಐವರು ಮೃತಪಟ್ಟಿರುವ ಘಟನೆ ನೆಲಮಂಗಲ ಸಮೀಪದ ಬೈಚಾಪುರ ಗ್ರಾಮದ ಬಳಿ ನಡೆದಿದೆ.

ಸ್ಕಾರ್ಪಿಯೋ ಕಾರಿನಲ್ಲಿದ್ದ ಕೆಂಪರಾಜು(40), ಮಕ್ಕಳಾದ ಸೌಮ್ಯ(10), ಸಂಜಯ್(2), ಸಾಜನ್(24) ಮತ್ತು ನವನೀದ್(25) ಮೃತರು. ನಾಲ್ವರಿಗೆ ಗಾಯಗಳಾಗಿದ್ದು, ಕೆಂಪರಾಜು ಪತ್ನಿ ಮಮತಾ(30) ಸ್ಥಿತಿ ಗಂಭೀರವಾಗಿದೆ. ನಾಲ್ವರು ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಕಾರ್ಪಿಯೋದಲ್ಲಿ 6 ಮಂದಿ ಬೆಂಗಳೂರಿನ  ನಾಗವಾರ ನಿವಾಸಿಗಳು ಚುಂಚಿಫಾಲ್ಸ್ ಗೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು, ರಸ್ತೆ ಪಕ್ಕದಲ್ಲಿ ಟೀ ಕುಡಿಯಲು ನಿಲ್ಲಿಸಿದ್ದ ಬೈಕ್ ಗೆ ಡಿಕ್ಕಿ ಹೊಡೆದು ನಂತರ ತಂಗುದಾಣಕ್ಕೆ ಗುದ್ದಿದೆ. ಈ ವೇಳೆ ಕಾರಿನಲ್ಲಿದ್ದ ಮೂವರು, ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಬೈಕ್ ಸವಾರರು, ಬೆಂಗಳೂರಿನ ಹೆಗ್ಗನಹಳ್ಳಿ ನಿವಾಸಿಗಳಾಗಿದ್ದಾರೆ. ಈ ಕುರಿತು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಜ್ರಮಹೋತ್ಸವ ಸಾಕ್ಷ್ಯಚಿತ್ರಗಳ ಕೋಟಿ ಖರ್ಚು ಲಕ್ಷಕ್ಕೆ ಇಳಿಕೆ..!