Select Your Language

Notifications

webdunia
webdunia
webdunia
webdunia

ಚಲಿಸುತ್ತಿದ್ದ ರೈಲಿನ ಮುಂದೆ ಸೆಲ್ಫಿ ಕ್ಲಿಕ್ಕಿಸಲು ಹೋದ ಮೂವರು ಯುವಕರ ದುರ್ಮರಣ

ಚಲಿಸುತ್ತಿದ್ದ ರೈಲಿನ ಮುಂದೆ ಸೆಲ್ಫಿ ಕ್ಲಿಕ್ಕಿಸಲು ಹೋದ ಮೂವರು ಯುವಕರ ದುರ್ಮರಣ
ಬೆಂಗಳೂರು , ಮಂಗಳವಾರ, 3 ಅಕ್ಟೋಬರ್ 2017 (14:03 IST)
ಚಲಿಸುತ್ತಿರುವ ರೈಲಿನ ಮುಂದೆ ಸೆಲ್ಫಿ ಕ್ಲಿಕ್ಕಿಸಲು ಹೋದ ಮೂವರು ಯುವಕರು ರೈಲಿಗೆ ಸಿಲುಕಿ ಭೀಕರವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ರಾಮನಗರದ ಬಿಡದಿ ಬಳಿಯ ವಂಡರ್ ಲಾ ಬಳಿ ನಡೆದಿದೆ.

ದ್ವಿಚಕ್ರ ವಾಹನದಲ್ಲಿ ಬಂದಿದ್ದ ಮೂವರು ಯುವಕರು ರೈಲು ಬರುತ್ತಿದ್ದದ್ದನ್ನ ನೋಡಿ ಅದರ ಮುಂದೆ ಹೋಗಿ ಸೆಲ್ಫಿ ಕ್ಲಿಕ್ಕಿಸಲು ಯತ್ನಿಸಿದ್ದಾರೆ. ಈ ಸಂದರ್ಭ ವೇಗವಾಗಿ ಬರುತ್ತಿದ್ದ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು ಬೆಂಗಳೂರಿನ ನ್ಯಾಶನಲ್ ಕಾಲೇಜು ವಿದ್ಯಾರ್ಥಿಗಳು ಎಂದು ಹೇಳಲಾಗಿದೆ.

ಇಬ್ಬರನ್ನ ಪ್ರಭು, ಆನಂದ್ ಎಂದು ಗುರ್ತಿಸಲಾಗಿದ್ದು, ಮತ್ತೊಂದು ದೇಹ ಛಿದ್ರ ಛಿದ್ರವಾಗಿರುವುದರಿಂದ ಗುರುತು ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಬಿಡದಿ ಪೊಲೀಸರು ಘಟನೆ ಕುರಿತಂತೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆ ಗುಂಡಿಯಿಂದಲೇ ಅಪಘಾತವಾಗಿದೆ ಅಂತ ಹೇಳಕ್ಕಾಗಲ್ಲ ಅಂದ್ರು ಸಚಿವ ಕೆಜೆ ಜಾರ್ಜ್