Select Your Language

Notifications

webdunia
webdunia
webdunia
webdunia

ಬೆಳಮಗಿ ಕೊಲೆ ಯತ್ನ ಆರೋಪ ಪ್ರಕರಣ: ನಾನು ಕೊಲೆ ಮಾಡಿಲ್ಲ ಎಂದ ಕಾರು ಚಾಲಕ

Revu naik belamagi
ಕಲಬುರ್ಗಿ , ಗುರುವಾರ, 12 ಅಕ್ಟೋಬರ್ 2017 (20:48 IST)
ಕಲಬುರ್ಗಿ: ಮಾಜಿ ಸಚಿವ ರೇವೂ ನಾಯಕ್ ಬೆಳಮಗಿ ಕೊಲೆ ಯತ್ನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಅವರ ಕಾರು ಚಾಲಕ ವಿನಯ್ ಪ್ರತ್ಯಕ್ಷ್ಯವಾಗಿದ್ದಾರೆ.
                ರೇವೂ ನಾಯಕ್, ಮಾಜಿ ಸಚಿವ

ಇದೇವೇಳೆ ಮಾತನಾಡಿದ ಚಾಲಕ ವಿನಯ್, ಸಮಾಜಿ ಸಚಿವ ರೇವೂ ನಾಯಕ್ ಬೆಳಮಗಿ ಅವರ ಕೊಲೆಗೆ ನಾನು ಯತ್ನ ಮಾಡಿಲ್ಲ.  ಅವರ ಇನ್ನೋವಾ ವಾಹನ ಚಲಾಯಿಸುವಾಗ ನವಿಲು ಅಡ್ಡ ಬಂದಿದ್ರಿಂದ ಪಕ್ಕದ ಸೇತುವೆಗೆ ಕಾರು ಗುದ್ದಿದ ಪರಿಣಾಮ ಅಪಘಾತವಾಗಿದೆ ಎಂದು ಹೇಳಿದ್ದಾರೆ.

ನಾನು ಕೊಲೆಗೆ ಯತ್ನ ಮಾಡಿಲ್ಲ. ಯಾವ ದೇವರ ಮೇಲೆ ಆಣೆ ಮಾಡಲೂ ನಾನು ಸಿದ್ಧ. ಅಪಘಾತವಾದ ನಂತರ ನನ್ನ ಮನೆಗೆ ಬಂದಿಲ್ಲ ಎಂದು ಬೆಳಮಗಿ ಆರೋಪ ಮಾಡಿದ್ದಾರೆ. ಅಪಘಾತವಾದ ಮಾರನೇ ದಿನವೇ ನಾನು ಅವರ ಮನೆಗೆ ಹೋಗಿದ್ದೇನೆ. ಆದರೆ ಅವರು ಯಾವುದೇ ರೆಸ್ಪಾನ್ಸ್ ಮಾಡಿಲ್ಲ. ಹೀಗಾಗಿ ನಾನು ಅಲ್ಲಿ ಕೆಲಸ ಬಿಟ್ಟು ಬೇರೆಡೆ ಕೆಲಸಕ್ಕೆ ಸೇರಿದ್ದೇನೆ. ನಾನು ಕೊಲೆಗೆ ಯತ್ನವೂ ಮಾಡಿಲ್ಲ. ಯಾರೂ ಕೊಲೆಗೆ ಕುಮ್ಮಕ್ಕು ನೀಡಿಲ್ಲ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತುಮಕೂರಿನಲ್ಲಿ ರೆಡ್ಮಿ ನೋಟ್ 4 ಮೊಬೈಲ್ ಸ್ಫೋಟ