Publish Date: Thu, 12 Oct 2017 (20:44 IST)
Updated Date: Thu, 12 Oct 2017 (20:47 IST)
ತುಮಕೂರು: ಮತ್ತೊಂದು ರೆಡ್ ಮಿ ಮೊಬೈಲ್ ಸ್ಫೋಟವಾಗಿದೆ. ನಗರದ ಟೌನ್ ಹಾಲ್ ಸರ್ಕಲ್‌ನಲ್ಲಿರುವ ಮೊಬೈಲ್ ಅಂಗಡಿಯಲ್ಲಿ ರೆಡ್ ಮಿ ನೋಟ್ 4 ಮೊಬೈಲ್ ಸ್ಫೋಟವಾಗಿದೆ.
ರೆಡ್ ಮಿ ಮೊಬೈಲ್ ಗೆ ಸ್ಕ್ರೀನ್‌ಗಾರ್ಡ್ ಹಾಕಿಸಿಕೊಳ್ಳಲು ಗ್ರಾಹಕರೊಬ್ಬರು ತಮ್ಮ ಹೊಸ ರೆಡ್ಮಿ ಮೊಬೈಲನ್ನು ಅಂಗಡಿಯಾತನಿಗೆ ನೀಡಿದ್ದಾರೆ. ಅಂಗಡಿಯಾತ ಮೊಬೈಲ್ ಬಿಚ್ಚಿ ಇಡುತ್ತಿದ್ದಂತೆ ಸ್ಫೋಟಗೊಂಡಿದ್ದು, ಭಾರೀ ಹೊಗೆ ಕಾಣಿಸಿಕೊಂಡಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಮೊಬೈಲ್ ಸಿಡಿದ ದೃಶ್ಯಗಳು ಅಂಗಡಿಯಲ್ಲಿರೋ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಬೆಂಗಳೂರಿನಲ್ಲಿಯೂ 2 ತಿಂಗಳ ಹಿಂದೆ ಇಂತಹದ್ದೇ ಘಟನೆ ನಡೆದಿತ್ತು. ರೆಡ್‌ಮಿ ನೋಟ್ 4 ಮೊಬೈಲ್ ಇತ್ತೀಚೆಗೆ ಹೆಚ್ಚು ಮಂದಿ ಬಳಸುತ್ತಿದ್ದಾರೆ. ಇದೀಗ ಮತ್ತೆ ಅದೇ ಕಂಪನಿಯ ಮೊಬೈಲ್ ಸಿಡಿದಿದ್ದು, ರೆಡ್‌ಮಿ ನೋಟ್ 4 ಬಳಸುತ್ತಿರುವ ಗ್ರಾಹಕರು ಗಾಬರಿಗೊಂಡಿದ್ದಾರೆ.